Karnataka Weather: ಈ ವಾರ ರಾಜ್ಯದಲ್ಲಿ ಮಳೆಯಿರಲಿದೆಯೇ ಇಲ್ಲಿದೆ ವಿವರ

Krishnaveni K
ಸೋಮವಾರ, 7 ಏಪ್ರಿಲ್ 2025 (08:34 IST)
ಬೆಂಗಳೂರು: ಕಳೆದ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿತ್ತು. ಈ ವಾರ ಮಳೆಯ ಸಾಧ್ಯತೆಯಿದೆಯೇ ಇಲ್ಲಿದೆ ಈ ವಾರದ ಕಂಪ್ಲೀಟ್ ಹವಾಮಾನ ವರದಿ.

ಕಳೆದ ವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಂತೂ ವ್ಯಾಪಕ ಮಳೆಯಾಗಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಎರಡು ದಿನ ವಿಪರೀತ ಮಳೆಯಾಗಿತ್ತು. ಇದಲ್ಲದೆ ಉತ್ತರದ ಕೆಲವು ಜಿಲ್ಲೆಗಳಲ್ಲೂ  ಮಳೆಯ ಸಿಂಚನವಾಗಿತ್ತು.

ವಿಪರೀತ ತಾಪಮಾನದಿಂದ ತತ್ತರಿಸಿದ್ದ ಜನಕ್ಕೆ ಈ ಮಳೆಯ ನೆಮ್ಮದಿ ನೀಡಿತ್ತು. ಆದರೆ ಈ ವಾರ ಕಳೆದ ವಾರದಷ್ಟು ಮಳೆಯಾಗುವ ಸಾಧ್ಯತೆಯಿಲ್ಲ. ಈ ವಾರ ಕೆಲವೊಂದು ಕಡೆ ಮೋಡ ಕವಿದ ವಾತಾವರಣ ಬಿಟ್ಟರೆ ವಾರಂತ್ಯದವರೆಗೂ ಮಳೆಯ ಸಾಧ್ಯತೆ ಕಡಿಮೆ ಎಂದು ವರದಿಗಳು ಹೇಳಿವೆ.

ಸೋಮವಾರ ಅಂದರೆ ಇಂದು ರಾಜ್ಯದಲ್ಲಿ ಸಂಪೂರ್ಣ ಬಿಸಿಲಿನ ವಾತಾವರಣವಿರಲಿದೆ. ಆದರೆ ಬುಧವಾರದ ನಂತರ ದಕ್ಷಿಣ ಕನ್ನಡ ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಸಣ್ಣ ಮಟ್ಟಿನ ಮಳೆಯಾಗುವ ಸಾಧ್ಯತೆಯಿದೆ. ಇದನ್ನು ಹೊರತುಪಡಿಸಿ ರಾಜ್ಯದ ಗರಿಷ್ಠ ತಾಪಮಾನ ಈ ವಾರ 32-33 ಡಿಗ್ರಿಯಷ್ಟಿರಲಿದೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಹೈಅಲರ್ಟ್

ಧರ್ಮಸ್ಥಳದ ಸೌಜನ್ಯಾ ಪ್ರಕರಣ: ಸಿಬಿಐ ತನಿಖಾ ವೈಖರಿಗೆ ಸುಪ್ರೀಂ ಕೆಂಡಾಮಂಡಲ, ಮರು ತನಿಖೆಗೆ ತಾತ್ವಿಕ ಒಪ್ಪಿಗೆ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ

ಶಾಲಾ ಬಸ್ ಮೇಲೆ ಬಿದ್ದ ಬೃಹತ್ ಮರ, ಯುಕೆಜಿ ಬಾಲಕಿ ಸಾವು, ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

NEET UG Paper Leak: ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಹೊಸ ಷರತ್ತುಗಳನ್ನು ಹಾಕಬಾರದು

ಮುಂದಿನ ಸುದ್ದಿ
Show comments