Daily Horoscope
✕

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಭಾರೀ ಮಳೆ ಸೂಚನೆ, ಉಳಿದೆಡೆ ಹೇಗಿದೆ ಮಳೆ

Krishnaveni K
ಬುಧವಾರ, 4 ಜೂನ್ 2025 (08:21 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಮಳೆಯ ಅಬ್ಬರವಿತ್ತು. ಆದರೆ ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಈ ಒಂದು ಜಿಲ್ಲೆಯಲ್ಲಿ ಮಾತ್ರ ಮಳೆಯಿರಲಿದೆ, ಉಳಿದೆಡೆ ಹವಾಮಾನ ಹೇಗಿರಲಿದೆ ಇಲ್ಲಿದೆ  ವಿವರ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಪ್ರವಾಹ ಸ್ಥಿತಿಯಿತ್ತು. ಈ ವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಹಾಗಂತ ಮಳೆ ಮುಂದುವರಿದೇ ಇದೆ. ನಿನ್ನೆಯೂ ಹಲವೆಡೆ ಮಳೆಯಾಗಿತ್ತು. ಇಂದೂ ಮಳೆ ಮುಂದುವರಿಯಲಿದೆ. ಇಂದೂ ಈ ಜಿಲ್ಲೆಗೆ ಮಾತ್ರ ಭಾರೀ ಮಳೆಯಾಗುವ ಸೂಚನೆಯಿದೆ.

ಮುಂಗಾರು ಮಳೆ ಈ ಬಾರಿ ಬೇಗನೇ ಆರಂಭವಾಗಿತ್ತು. ಜೊತೆಗೆ ವಾಯುಭಾರ ಕುಸಿತವೂ ಇದ್ದಿದ್ದರಿಂದ ಭಾರೀ ಮಳೆಯಾಗಿತ್ತು. ಆದರೆ ಇದೀಗ ನಾಲ್ಕೈದು ದಿನಗಳಿಂದ ವರುಣ ಕೊಂಚ ಬ್ರೇಕ್ ಕೊಟ್ಟಿದ್ದಾನೆ. ಹೀಗಾಗಿ ಈ ವಾರ ಬೇರೆ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆಯಿಲ್ಲ.

ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಕೊಡಗು, ಹಾವೇರಿ, ರಾಯಚೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಾಸನ, ತುಮಕೂರು,ಚಿತ್ರದುರ್ಗ, ಗದಗ, ಕೊಪ್ಪಳ, ಬಳ್ಳಾರಿ, ಚಾಮಾಜನಗರ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments