Publish Date: Mon, 06 Apr 2026 (08:27 IST)
Updated Date: Mon, 06 Apr 2026 (08:29 IST)
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರ ಅಲ್ಲಲ್ಲಿ ಮಳೆಯಾಗಿತ್ತು. ಈ ವಾರವೂ ಮಳೆಯ ಸಾಧ್ಯತೆಯಿದೆಯಾ, ಇಲ್ಲಿದೆ ವಾರದ ಹವಾಮಾನ ವರದಿ.
ಬಿರು ಬೇಸಿಗೆಯ ನಡುವೆ ಕರಾವಳಿ, ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕಳೆದ ವಾರ ಗುಡುಗು ಸಹಿತ ಮಳೆಯಾಗಿತ್ತು. ಇದರಿಂದ ವಾತಾವರಣ ಕೊಂಚ ತಂಪಾಗಿತ್ತು. ವಾರಂತ್ಯದಲ್ಲೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಆದರೆ ಈ ವಾರ ಮಳೆಯ ಸೂಚನೆಯಿಲ್ಲ.
ಈ ವಾರಂತ್ಯಕ್ಕೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಬಿಟ್ಟರೆ ಉಳಿದ ದಿನಗಳಲ್ಲಿ ಮಳೆಯ ಸೂಚನೆಯಿಲ್ಲ. ಕರ್ನಾಟಕದಲ್ಲಿ ಈ ವಾರ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟು ಕಂಡುಬರಲಿದೆ. ಕನಿಷ್ಠ ತಾಪಮಾನ ಆರಂಭದಲ್ಲಿ 21 ಡಿಗ್ರಿಯಷ್ಟಿದ್ದರೆ ವಾರಂತ್ಯಕ್ಕೆ 23 ರವರೆಗೆ ತಲುಪುವ ಸಾಧ್ಯತೆಯಿದೆ.
ಬಳ್ಳಾರಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಂತೂ ಈ ವಾರಂತ್ಯಕ್ಕೆ ಗರಿಷ್ಠ ತಾಪಮಾನ 39 ಡಿಗ್ರಿಯವರೆಗೆ ತಲುಪಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವಾರಂತ್ಯದ ವೇಳೆಗೆ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಾಗಲಿದೆ. ಈ ವಾರವಿಡೀ ಬಿಸಿಲಿನ ವಾತಾವರಣ ಕಂಡುಬರಲಿದೆ.