Karnataka Weather: ಈ ವಾರ ಮಳೆಯಿದೆಯೇ, ಎಲ್ಲೆಗೆ ಹೆಚ್ಚು ಮಳೆ ಇಲ್ಲಿದೆ ಹವಾಮಾನ ವರದಿ

Krishnaveni K
ಸೋಮವಾರ, 23 ಜೂನ್ 2025 (08:30 IST)
ಬೆಂಗಳೂರು: ಕಳೆದ ವಾರ ಆರಂಭದಲ್ಲಿ ಮಳೆ ಅಬ್ಬರಿಸಿದ್ದರೂ ವಾರದ ಮಧ್ಯಭಾಗದಿಂದ  ಮಳೆ ಕಡಿಮೆಯಾಗಿತ್ತು. ಈ ವಾರವಿಡೀ ಮಳೆಯಿರುತ್ತದೆಯೇ, ಯಾವ ಜಿಲ್ಲೆಗೆ ಹೆಚ್ಚು ಮಳೆ ಸಾಧ್ಯತೆ ಇಲ್ಲಿದೆ ವಿವರ.

ಈ ವಾರವೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಕಡಿಮೆ. ಬಹುತೇಕ ವಾರವಿಡೀ ಮೋಡ ಕವಿದ ವಾತಾವರಣ ಕೆಲವೊಮ್ಮೆ ಮಾತ್ರ ತುಂತುರು ಮಳೆಯಾಗಲಿದೆ. ಅದು ಬಿಟ್ಟರೆ ಈ ವಾರ ಬೆಂಗಳೂರಿಗೆ ಭಾರೀ ಮಳೆಯ ಮುನ್ಸೂಚನೆಯೇನೂ ಕಂಡುಬರುತ್ತಿಲ್ಲ. ಕಳೆದ ವಾರವೂ ಮೋಡ ಕವಿದ ವಾತಾವರಣವಿತ್ತು.

ರಾಜ್ಯದಲ್ಲಿ ಕಳೆದ ವಾರ ಹೆಚ್ಚು ಮಳೆಯಾಗಿದ್ದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ. ಈ ಎರಡು ಜಿಲ್ಲೆಗಳಿಗೆ ಈ ವಾರವೂ ಮಳೆಯ ಮುನ್ಸೂಚನೆಯಿದೆ. ಹಾಗಿದ್ದರೂ ವಾರಂತ್ಯದಲ್ಲಿ ಈ ಎರಡು ಜಿಲ್ಲೆಗಳಲ್ಲಿ ಮಳೆ ಕೊಂಚ ತಗ್ಗಿತ್ತು. ಈ ವಾರದ ಆರಂಭದಲ್ಲೂ ಈ ಎರಡು ಜಿಲ್ಲೆಗಳಲ್ಲಿ ಮಳೆ ಆರಂಭದ ಎರಡು ದಿನ ಕಡಿಮೆಯಾಗಿರಲಿದೆ. ಆದರೆ ಬುಧವಾರದಿಂದ ಮತ್ತೆ ಮಳೆ ಬಿರುಸಾಗಲಿದೆ. ದಕ್ಷಿಣ ಕನ್ನಡದಲ್ಲಿ ಬುಧವಾರದಿಂದ  ತೊಡಗಿ ವಾರಂತ್ಯದವರೆಗೂ ಭಾರೀ ಮಳೆಯ ಸೂಚನೆಯಿದೆ. ಉಡುಪಿಯಲ್ಲಿ ಇಂದೂ ಭಾರೀ ಮಳೆಯ ಸೂಚನೆಯಿದೆ.

ಉಳಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ತುಮಕೂರು, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ವಾರವಿಡೀ ಸಣ್ಣ ಮಟ್ಟಿಗೆ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣವಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments