Daily Horoscope

Select Your Language

Notifications

webdunia
webdunia
webdunia
webdunia

Karnataka Weather: ರಾಜ್ಯದಲ್ಲಿ ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

Karnataka Weather
Photo Credit X
ಬೆಂಗಳೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದ ಹಲವಡೆ ಇದೀಗ ಮಳೆಯಾಗುತ್ತಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಹಾಗೂ ಬಲವಾದ ಗಾಳಿ ಹಾಗೆಯೇ ಮುಂದುವರೆಯಲಿದೆ ಎಂದು ಮುನ್ಸೂಚನೆಯಿದೆ. 

ಇನ್ನೂ ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭಾರೀ ಮಳೆಯಾಗುತ್ತಿದ್ದು, ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ತಿರುವಿನ ಪರಿಣಾಮವೇ ಇದೀಗ ರಾಜ್ಯದಲ್ಲಿ ನಿರಂತರ ಮಳೆಗೆ ಕಾರಣ ಎನ್ನಲಾಗಿದೆ. 

ಇನ್ನೂ ಈ ಬಾರೀ ರಾಜ್ಯದಲ್ಲಿ ನಿರೀಕ್ಷೆ ಮಾಡಿದ ರೀತಿಯಲ್ಲಿ ಮುಂಗಾರು ಚುರುಕುಗೊಂಡಿರದೆ ಇರುವುದು ಭಾರೀ ವ್ಯತ್ಯಯವನ್ನು ಮೂಡಿಸಿದೆ. 

ಅದಾಗ್ಯೂ 'ಸುಪರ್ ಎಲ್ ನಿನೋ' ಪರಿಣಾಮದಿಂದ ಮುಂಗಾರು ಮಾರುತಗಳು ಸ್ವಲ್ಪ ದುರ್ಬಲಗೊಂಡಿರುವುದನ್ನೂ ಹವಾಮಾನ ಇಲಾಖೆ ಉಲ್ಲೇಖಿಸಿದೆ.

ಬೆಳಗಾವಿ, ಧಾರವಾಡ, ಗದಗ್, ಬೀದರ್, ಕಲಬುರಗಿ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಪ್ರಧಾನಿಯಾದರು ಬದಲಾಗದ ಚೆನ್ನಮ್ಮ ಸರಳತೆ, ದೇವೇಗೌಡರ ಕಷ್ಟಕ್ಕೆ ಚಿನ್ನವನ್ನು ಅಡವಿಟ್ಟಿದ್ದರಂತ್ತೆ