ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ಕರ್ನಾಟಕ ಪೊಲೀಸ್ ನಗದು ರೂಪದಲ್ಲಿ ದಂಡ ವಿಧಿಸುತ್ತಿತ್ತು. ನಗದು ಇಲ್ಲದವರಿಗೆ ಆನ್ಲೈನ್ ಅಂದರೆ ಇ-ಚಲನ್ ಮೂಲಕ ದಂಡ ವಿಧಿಸುತ್ತಿದ್ದರು. ಅದು ಇದೀಗ ದಾಖಲೆ ಬರೆದಿದ್ದು, ಇ-ಚಲನ್ ಬಳಕೆಯಲ್ಲಿ ಕರ್ನಾಟಕವೇ ಟಾಪ್ 1 ಆಗಿ ಹೊರಹೊಮ್ಮಿದೆ. ಇ-ಚಲನ್ ಬಳಕೆಯ ಅಂಕಿ ಅಂಶಗಳನ್ನ ಬಿಡುಗಡೆ ಮಾಡಲಾಗಿದ್ದು, ಇ-ಚಲನ್ ಬಳಕೆಯಲ್ಲಿ ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಆಗಸ್ಟ್ 1 ರಿಂದ 9 ರವರೆಗೆ ಇ-ಚಲನ್ ಮೂಲಕ 24,583 ಕೇಸ್ಗಳನ್ನ ದಾಖಲಿಸಿ, 1.22 ಕೋಟಿ ದಂಡವನ್ನ ಹಾಕಿದ್ದಾರೆ. ಟ್ರಾಫಿಕ್ ಪೊಲೀಸರು 111 ಪ್ರಕರಣಗಳಲ್ಲಿ 55,500 ರೂಪಾಯಿ ದಂಡವನ್ನ ವಸೂಲಿ ಮಾಡಿದ್ದಾರೆ. ಶೀಘ್ರದಲ್ಲೇ ರಾಜ್ಯಾದ್ಯಂತ ಇ-ಚಲನ್ ಮೂಲಕವೇ ಕೇಸ್ ಹಾಕಲು ಯೋಚಿಸುತ್ತಿದ್ದು, ಆ ಮೂಲಕ ರಸೀದಿ ಬಳಕೆಗೆ ಬ್ರೇಕ್ ಹಾಕಲು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದೆ.