Select Your Language

Notifications

webdunia
webdunia
webdunia
webdunia

ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ..

ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ..
ಬೆಂಗಳೂರು , ಶುಕ್ರವಾರ, 26 ಮೇ 2017 (18:16 IST)
ಬೆಂಗಳೂರು:ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸಂಗ್ರಹವಾಗುವ ಒಟ್ಟು ರಕ್ತದಲ್ಲಿ ಶೇ.10 ಪೋಲಾಗುತ್ತಿದೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮಾಹಿತಿ ನೀಡಿದೆ.
 
ರಾಜ್ಯದಲ್ಲಿ 40 ಸರ್ಕಾರಿ ರಕ್ತನಿಧಿ ಕೇಂದ್ರಗಳು ಸೇರಿ 200 ರಕ್ತನಿಧಿ ಕೇಂದ್ರಗಳಿವೆ. ಇಷ್ಟು ದೊಡ್ಡ ರಕ್ತನಿಧಿ ಜಾಲ ಹಾಗೂ ಸ್ವಯಂಪ್ರೇರಿತ ದಾನಿಗಳಿದ್ದರೂ ರಾಜ್ಯದಲ್ಲಿ ನಿತ್ಯವೂ ಅನೇಕರು ರಕ್ತಕ್ಕಾಗಿ ಪರದಾಡುವುದು ಸಾಮಾನ್ಯವಾಗಿದೆ.
 
2016 ಏಪ್ರಿಲ್‌ನಿಂದ 2017 ಮಾರ್ಚ್ವರೆಗೆ ರಾಜ್ಯದಲ್ಲಿ 7.2 ಲಕ್ಷ ಯೂನಿಟ್ ರಕ್ತ ಸಂಗ್ರಹವಾಗಿದೆ. ಈ ಅವಧಿಗೆ ಸರ್ಕಾರ 6.25 ಲಕ್ಷ ಯೂನಿಟ್ ಸಂಗ್ರಹ ಗುರಿ ಇಟ್ಟುಕೊಂಡಿತ್ತು. ಆದರೆ, ನಿರೀಕ್ಷೆಗೂ ಮೀರಿ ಅಂದರೆ ಶೇ.109 ಸಾಧನೆಯಾಗಿದೆ. ಮಹಾರಾಷ್ಟ್ರದ ಆರ್‌ಟಿಐ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ (ಕಸಪ್ಸ್) ಅಮೂಲ್ಯವಾದ ರಕ್ತ ವ್ಯರ್ಥವಾಗದಂತೆ ತಡೆಯಲು ಮುಂದಾಗಿದ್ದು,  ಮೊದಲಿಗೆ ಖಾಸಗಿ ರಕ್ತನಿಧಿ ಕೇಂದ್ರಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ. 
 
ಜೀವ ಸಂಜೀವಿನಿ ಹೆಸರಿನಲ್ಲಿ ಯಾವ ರಕ್ತನಿಧಿ ಕೇಂದ್ರದಲ್ಲಿ ಯಾವ ಮಾದರಿಯ ರಕ್ತ ಸಂಗ್ರಹವಿದೆ ಎಂಬುದನ್ನು ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ತಿಳಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆಯಾದರೆ ಸಮರ್ಪಕವಾಗಿ ಅಪ್‌ಡೇಟ್ ಮಾಡುತ್ತಿಲ್ಲ. ಹಾಗಾಗಿ ಮಾಹಿತಿ ಅಪ್‌ಡೇಟ್ ಮಾಡದಿದ್ದರೆ ರಕ್ತನಿಧಿಗಳ ಪರವಾನಗಿ ರದ್ದುಪಡಿಸುವ ಬಗ್ಗೆ ಕಸಪ್ಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೇಶಾದ್ಯಂತ ಗೋಹತ್ಯೆ ನಿಷೇಧ: ಗೋಹತ್ಯೆ ಮಾಡಿದರೆ 7 ವರ್ಷ ಜೈಲು