Select Your Language

Notifications

webdunia
webdunia
webdunia
webdunia

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯವಿಲ್ಲ: ಕಾಗೋಡು

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯವಿಲ್ಲ: ಕಾಗೋಡು
ಬೆಂಗಳೂರು , ಮಂಗಳವಾರ, 14 ಮಾರ್ಚ್ 2017 (15:25 IST)
ಕರ್ನಾಟಕಕ್ಕೆ ಪ್ರದಾನಮಂತ್ರಿ ನರೇಂದ್ರ ಮೋದಿ ಭಯವಿಲ್ಲ. ಸಿಎಂ ಸಿದ್ದರಾಮಯ್ಯರ ಅನೇಕ ಜನಪರ ಯೋಜನೆಗಳನ್ನು ಸ್ಮರಿಸಿದರೆ ಸಾಕು. ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗುತ್ತದೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಗುಡುಗಿದ್ದಾರೆ. 
 
ಪ್ರಧಾನಿ ಮೋದಿಯವರ ಪ್ರಭಾವಿ ನಾಯಕತ್ವದಲ್ಲಿ ಬಿಜೆಪಿ ಪಂಚರಾಜ್ಯಗಳ ಚುನಾವಣೆಯನ್ನು ವ್ಯವಸ್ಥಿತವಾಗಿ ಎದುರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಭೇರಿ ದಾಖಲಿಸಿದೆ. ಪಂಚರಾಜ್ಯಗಳಲ್ಲಿ ಮೋದಿ ರಣತಂತ್ರ ಯಶಸ್ವಿಯಾಗಿದೆ
 
ಉತ್ತರಪ್ರದೇಶದಲ್ಲಿ ಅಪ್ಪ ಮಗನ ವೈಮನಸ್ಸಿನಿಂದ ಬಿಜೆಪಿ ಪಾಲಾಗಿದೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿ ಆದ್ರೆ ಕಾಂಗ್ರೆಸ್ ಮಾಸ್ ಬೇಸ್ಡ್ ಪಾರ್ಟಿಯಾಗಿದೆ. ರಾಜ್ಯದ ಇವತ್ತಿನ ಪರಿಸ್ಥಿತಿಯಲ್ಲಿ ಕೇಡರ್‌ಗಳ ಕೊರತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು 
 
ಪಕ್ಷ ಸಂಘಟನೆಯಲ್ಲಿ ಹೆಚ್ಚು ಬದಲಾವಣೆಗಳು ಅಗತ್ಯವಾಗಿವೆ. ಮುಂಬರುವ ದಿನಗಳಲ್ಲಿ ಕೆಪಿಸಿಸಿಯಲ್ಲಿ ಸಮಗ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಮೇಲೇ ಅತ್ಯಾಚಾರಕ್ಕೆ ಸ್ನೇಹಿತನಿಗೆ ಸಹಕರಿಸಿದ ಪತಿ..!