Webdunia - Bharat's app for daily news and videos

Install App

ಕೆ -ಸೆಟ್ ಮುಂದೂಡ್ತಾರಾ ಇಲ್ವಾ? ಗೊಂದಲದಲ್ಲಿ ಪರೀಕ್ಷಾರ್ಥಿಗಳು

Webdunia
ಬುಧವಾರ, 30 ನವೆಂಬರ್ 2016 (09:14 IST)
ಬರುವ ಡಿಸೆಂಬರ್ 11 ರಂದು ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್), ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳು ಹಾಗೂ ಜವಾಹರ ನವೋದಯ ವಿದ್ಯಾಲಯದ ಪರೀಕ್ಷೆಗಳು ಏಕಕಾಲಕ್ಕೆ ಬಂದಿರುವುದರಿಂದ ಕೆ-ಸೆಟ್ ಪರೀಕ್ಷೆಯ ದಿನಾಂಕವನ್ನು ಬದಲಿಸಲು ಪರಿಶೀಲಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
 
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ಅರುಣ ಶಹಾಪೂರ ಅವರು ವಿಷಯ ಪ್ರಸ್ತಾಪಿಸಿ ಒಂದೇ ದಿನ ಅನೇಕ ಪರೀಕ್ಷೆಗಳನ್ನು ನಡೆಸಿದರೆ, ಅರ್ಹ ಅಭ್ಯರ್ಥಿಗಳಿಗೆ ಅವಕಾಶಗಳನ್ನು ನಿರಾಕರಿಸಿದಂತಾಗುತ್ತದೆ. ಆದ್ದರಿಂದ ಪರೀಕ್ಷಾ ದಿನಾಂಕವನ್ನು ಬದಲಿಸಿ ಎಂದು ಒತ್ತಾಯಿಸಿದಾಗ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು.
 
ಕೆ-ಸೆಟ್ ಪರೀಕ್ಷೆಯನ್ನು ಡಿಸೆಂಬರ್ 11 ರಂದು ನಡೆಸಲು ಎಲ್ಲ ತಯಾರಿಗಳು ಪೂರ್ಣಗೊಂಡಿವೆ. ಈಗಾಗಲೇ 66 ಸಾವಿರ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಕಳುಹಿಸಲಾಗಿದೆ. ಈ ಹಂತದಲ್ಲಿ ದಿನಾಂಕ ಬದಲಿಸುವುದು ಕಷ್ಟದ ಕೆಲಸ. ಕರ್ನಾಟಕ ಲೋಕ ಸೇವಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದೆ. ಜವಾಹರ ನವೋದಯ ವಿದ್ಯಾಲಯದ ಪರೀಕ್ಷೆಗಳನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆಯೋಜಿಸುತ್ತದೆ. ಈ ಎರಡೂ ಪರೀಕ್ಷೆಗಳ ದಿನ ಬದಲಿಸುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇಲ್ಲ. ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿರುವ ಕೆ-ಸೆಟ್ ಪರೀಕ್ಷೆ ದಿನಾಂಕ ಬದಲಿಸಲು ಇರುವ ಸಾಧಕ ಬಾಧಕಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತಮವಾದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments