Webdunia - Bharat's app for daily news and videos

Install App

ಬರಗಾಲದಲ್ಲೂ ರಾಜ್ಯ ಬೊಕ್ಕಸಕ್ಕೆ ಹರಿದು ಬಂದ ಝಣಝಣ ಕಾಂಚಾಣ

Webdunia
ಬುಧವಾರ, 30 ನವೆಂಬರ್ 2016 (08:59 IST)
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಸೆಪ್ಟಂಬರ್ ಅಂತ್ಯದವರೆಗೆ ರಾಜ್ಯದ ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಶೇ.11.5ರಷ್ಟು ಹೆಚ್ಚಳ ಉಂಟಾಗಿದೆ ಎಂದು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾದ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ ಮತ್ತು ನೋಂದಣಿ ಮತ್ತು ಮುದ್ರಾಂಕ ಸೇರಿದಂತೆ ರಾಜ್ಯದ ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಹಣಕಾಸು ಸಾಲಿನ ಪ್ರಥಮ ಆರು ತಿಂಗಳಲ್ಲಿ ಗಣನೀಯ ಸಾಧನೆ ಮಾಡಲಾಗಿದೆ. ಈ ಅವಧಿಯಲ್ಲಿ ಆಯವ್ಯಯ ಅಂದಾಜುಗಳ ಶೇ.47ರಷ್ಟು ಪ್ರಮಾಣವನ್ನು ಸ್ವಂತ ತೆರಿಗೆ ರಾಜಸ್ವಗಳಲ್ಲಿ ಈಗಾಗಲೇ ಸಾಧಿಸಲಾಗಿದೆ. ಇದು ಕಳೆದ ಸಾಲಿನ ಇದೇ ಅವಧಿಯಲ್ಲಿನ ಸಾಧನೆಗಿಂತ ಹೆಚ್ಚಿನದ್ದಾಗಿದೆ ಎಂದು ಹಣಕಾಸು ಖಾತೆ ಸಹ ಹೊಂದಿರುವ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
 
 
ವಾಣಿಜ್ಯ ತೆರಿಗೆ 24792 ಕೋಟಿ ರೂ, ಅಬಕಾರಿ ತೆರಿಗೆ 8063 ಕೋಟಿ ರೂ, ಮೋಟಾರು ವಾಹನ ತೆರಿಗೆ 2584 ಕೋಟಿ ರೂ, ನೋಂದಣಿ ಮತ್ತು ಮುದ್ರಾಂಕ 4006 ಕೋಟಿ ರೂ ಮತ್ತು ಇತರ 316 ಕೋಟಿ ರೂ. ಒಟ್ಟು 39762ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ. ಆಯವ್ಯಯ ಅಂದಾಜಿನಲ್ಲಿ ಒಟ್ಟು 83864ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಆಯವ್ಯಯ ಗುರಿಯನ್ನು ತಲುಪುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
 
ಯೋಜನಾ ವೆಚ್ಚವನ್ನು ಉತ್ತಮಪಡಿಸುವ ಮೂಲಕ ಯೋಜನೆಗಳ ಅನುಷ್ಟಾನಕ್ಕೆ ಚುರುಕು ಮೂಡಿಸಲಾಗಿದೆ. ಎಲ್ಲಾ ಪ್ರಮುಖ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಣ ಬಿಡುಗಡೆಯ ಅಧಿಕಾರವನ್ನು ಸಂಬಂಧಪಟ್ಟ ಆಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾಗಿದೆ. ಮೊದಲ ಆರು ತಿಂಗಳ ಅವಧಿಯಲ್ಲಿ ಯೋಜನಾ ವೆಚ್ಚ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.6.92ರಷ್ಟು ಏರಿಕೆಯಾಗಿದೆ. ಈ ಅವಧಿಯ ಯೋಜನಾ ವೆಚ್ಚ 22270 ಕೋಟಿ ರೂ. ಆಗಿದ್ದು, ಆಯವ್ಯಯ ಅಂದಾಜಿನ ಶೇ.31.06ರಷ್ಟಿದೆ ಎಂದು ಹೇಳಿದ್ದಾರೆ.
 
ಯೋಜನೇತರ ವೆಚ್ಚದಲ್ಲಿನ ಬೆಳವಣಿಗೆ ದರ ಯೋಜನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ಮಿತವ್ಯಯ ಆದೇಶಗಳನ್ನು ಜಾರಿಗೊಳಿಸಿರುವುದರಿಂದ ಇದು ಸಾಧ್ಯವಾಗಿದೆ. ರಾಜ್ಯದ ಹಣಕಾಸನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿತ್ತೀಯ ಕ್ರೋಡೀಕರಣ ಪಥವನ್ನು ರಚಿಸಿದ ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕವಾಗಿದ್ದು, ನಿರ್ದಿಷ್ಟಗೊಳಿಸಿದ ವಿತ್ತೀಯ ಮತ್ತು ಋಣ ಸಂಗ್ರಹಣಾ ಗುರಿಯನ್ನು ನಿಗದಿಪಡಿಸಲಾದ ಅವಧಿಗೆ ಮುನ್ನವೇ ಸಾಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ಪೂರಕ ಅಂದಾಜು ಮಂಡನೆ: ಪೂರಕ ಅಂದಾಜುಗಳ 2ನೇ ಕಂತಿನಲ್ಲಿ 3447.82 ಕೋಟಿ ರೂ.ಗಳ ಒಟ್ಟು ವೆಚ್ಚದ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಲಾಯಿತು. ಜಿಲ್ಲಾ ಮತ್ತು ಇತರ ರಸ್ತೆಗಳು, ಸ್ಮಾರ್ಟ್ ಸಿಟಿ ಮಿಷನ್ ಮತ್ತು ಕೃಷಿ ಭಾಗ್ಯ ಯೋಜನೆ ಪೂರಕ ಅಂದಾಜುಗಳ 2ನೇ ಕಂತಿನಲ್ಲಿ ಸೇರಿಸಲಾಗಿರುವ ಪ್ರಮುಖ ಅಂಶಗಳು. ರಾಜ್ಯದ ವಿತ್ತೀಯ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅತ್ಯಗತ್ಯ ಅವಶ್ಯಕತೆಗಳನ್ನು ಮಾತ್ರ ಪೂರಕ ಅಂದಾಜುಗಳಲ್ಲಿ ಸೇರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೃದಯಾಘಾತಕ್ಕೆ ತಿಂಗಳ ಮುಂಚೇ ಸಿಗುವ ಮುನ್ಸೂಚನೆಗಳೇನು: ಡಾ ಸಿಎನ್ ಮಂಜುನಾಥ್

ಥಾಣೆ: ಮುಟ್ಟಾಗಿದೆಯಾ ಎಂದು ಬಾಲಕಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್

Karnataka Weather: ರಾಜ್ಯದಲ್ಲಿ ಇಂದೂ ಈ ಜಿಲ್ಲೆಗಳಿಗೆ ಭಾರೀ ಮಳೆ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

ಮುಂದಿನ ಸುದ್ದಿ
Show comments