Select Your Language

Notifications

webdunia
webdunia
webdunia
webdunia

Karnataka Rains: ಈ ವಾರ ತಗ್ಗುತ್ತಾ ಮಳೆಯ ಅಬ್ಬರ

Karnataka Rain

Krishnaveni K

ಬೆಂಗಳೂರು , ಸೋಮವಾರ, 28 ಜುಲೈ 2025 (08:46 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗಿತ್ತು. ಈ ವಾರವೂ ಮಳೆಯಿರುತ್ತಾ ಅಥವಾ ಅಬ್ಬರ ಕಡಿಮೆಯಾಗುತ್ತಾ ಇಲ್ಲಿದೆ ವಾರದ ಹವಾಮಾನ ವರದಿ.

ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗಿ ಸಾಕಷ್ಟು ಹಾನಿಗಳಾಗಿವೆ. ವಿಶೇಷವಾಗಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹವಾಮಾನ ವರದಿಗಳ ಪ್ರಕಾರ ಕರಾವಳಿ ಮತ್ತು ಮಲೆನಾಡಿನಲ್ಲಿ ಈ ವಾರವೂ ನಿರಂತರ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಈ ವಾರವೂ ಭಾರೀ ಮಳೆಯ ನಿರೀಕ್ಷೆಯಿದೆ.

ಕಳೆದ ವಾರ ಬೆಂಗಳೂರಿನಲ್ಲೂ ನಿರಂತರ ಮಳೆಯಾಗಿತ್ತು. ಆದರೆ ಈ ವಾರ ಬುಧವರಾದ ಬಳಿಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಾರದ ಆರಂಭದಲ್ಲಿ  ವರುಣ ಬಿಡುವು ನೀಡಲಿದ್ದಾನೆ. ಉಳಿದಂತೆ ಚಿಕ್ಕಮಗಳೂರು,  ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೂ ಈ ವಾರವಿಡೀ ಮಳೆಯ ಸೂಚನೆಯಿದೆ.

ಇದಲ್ಲದೆ, ಚಾಮರಾಜನಗರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ವಾರವಿಡೀ ಮಳೆಯ ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆಯಾಗುವ ಸಾಧ್ಯತೆಯಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ರಾಜ್ಯಾದಾದ್ಯಂತ ಸರಾಸರಿಯಾಗಿ ನೋಡಿದರೆ ಮಳೆಯ ಅಬ್ಬರ ಕಡಿಮೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು