Select Your Language

Notifications

webdunia
webdunia
webdunia
webdunia

ಕರ್ನಾಟಕ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಮಾಡಿದ ಪಾಕ್ ಹ್ಯಾಕರ್‌ಗಳು

ಕರ್ನಾಟಕ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಮಾಡಿದ ಪಾಕ್ ಹ್ಯಾಕರ್‌ಗಳು
ಬೆಂಗಳೂರು , ಶುಕ್ರವಾರ, 10 ಜೂನ್ 2016 (14:51 IST)
ಕರ್ನಾಟಕ ಪೊಲೀಸ್ ವೆಬ್‌ಸೈಟ್‌ನ್ನು ಪಾಕಿಸ್ತಾನ ಮೂಲದ ಹ್ಯಾಕರ್‌ಗಳು ಇಂದು ಹ್ಯಾಕ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕರ್ನಾಟಕ ಪೊಲೀಸ್ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನದ ಧ್ವಜಗಳ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಇದೆಂತಹ ಭದ್ರತೆ? ನಿಮ್ಮ ಭದ್ರತೆಗಿಷ್ಟು ನಾಯಿಕೆಯಾಗಬೇಕು. ನಾವು ಪಾಕಿಸ್ತಾನ ಸೈಬರ್ ತಂಡದ ಹ್ಯಾಕರ್‌ಗಳು ಎಂದು ಪಾಕ್ ಧ್ವಜದೊಂದಿಗೆ ಪೋಸ್ಟ್ ಮಾಡಿದ್ದಾರೆ.
 
ದೇಶದಲ್ಲಿ ಅತಿ ಉತ್ತಮವಾದ ತಂತ್ರಜ್ಞಾನ ಹೊಂದಿರುವ ಕರ್ನಾಟಕ ಪೊಲೀಸ್ ಇಲಾಖೆಗೆ ಹ್ಯಾಕರ್‌ಗಳು ಬಿಸಿಮುಟ್ಟಿಸಿರುವುದು ಪೊಲೀಸ್ ಇಲಾಖೆಗೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
 
ಕರ್ನಾಟಕ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಖಚಿತಪಡಿಸಿದ್ದು, ಶೀಘ್ರದಲ್ಲಿಯೇ ವೆಬ್‌ಸೈಟ್ ಸರಿಪಡಿಸಲಾಗುವುದು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳು ಯಾವ ಐಪಿ ವಿಳಾಸದಿಂದ ಹ್ಯಾಕ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

16 ವರ್ಷದ ಬಾಲಕಿಯನ್ನು ಅಪಹರಿಸಿ ಕಾರಿನಲ್ಲಿಯೇ ಅತ್ಯಾಚಾರವೆಸಗಿದ ಆರೋಪಿಗಳು