Select Your Language

Notifications

webdunia
webdunia
webdunia
webdunia

ಮಹಿಳೆಗೆ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸಿದ ಯುವಕನನ್ನು ಥಳಿಸಿದ ಸ್ಥಳೀಯರು

ಮಹಿಳೆಗೆ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸಿದ ಯುವಕನನ್ನು ಥಳಿಸಿದ ಸ್ಥಳೀಯರು
ಮಂಗಳೂರು , ಸೋಮವಾರ, 23 ಮೇ 2016 (15:14 IST)
ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ನನ್ನೊಂದಿಗೆ ಮಲಗಲು ಬರುತ್ತೀಯಾ ಎಂದು ಕೇಳಿದ ಯುವಕನನ್ನು ಅಲ್ಲಿದ್ದ ಜನರು ಮನಬಂದಂತೆ ಥಲಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
 
ಪೊಲೀಸ್ ಮೂಲಗಳ ಪ್ರಕಾರ, ಉತ್ತರಪ್ರದೇಶ ಮೂಲದ ವ್ಯಕ್ತಿಯೊಬ್ಬ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಹಣದ ನೋಟುಗಳನ್ನು ತೋರಿಸಿ, ನನ್ನೊಂದಿಗೆ ಮಲಗಲು ಬರುತ್ತೀಯಾ ಎಂದು ಕೇಳಿದ್ದಾನೆ. ಯುವಕನ ಪ್ರಶ್ನೆಯಿಂದ ಆಘಾತಗೊಂಡ ಮಹಿಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದವರಿಗೆ ಯುವಕನ ವರ್ತನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಸ್ಥಳೀಯರು ಯುವಕನನ್ನು ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. 
 
ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ವೇಶ್ಯೆ ಎಂದು ತಿಳಿದು ಹಣ ತೋರಿಸಿ ಮಲಗಲು ಬರುತ್ತೀಯಾ ಎಂದು ಕೇಳಿದ್ದಾಗಿ ಆರೋಪಿ ಯುವಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಹಿನ್ನೆಲೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಹಿಳೆ ಕೆಲಸಕ್ಕಾಗಿ ತೆರಳಲು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ನಿಂತಿರುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ: ಸಿಎಂ ಸಿದ್ದರಾಮಯ್ಯ