Select Your Language

Notifications

webdunia
webdunia
webdunia
webdunia

ಕೇಂದ್ರದ ಪ್ರತಿಷ್ಠಿತ ಕೇಂದ್ರ ಗೃಹಮಂತ್ರಿ ಪದಕಕ್ಕೆ ಬಾಜನರಾದ ಕರ್ನಾಟಕ ಕಲಿಗಳು

ಕೇಂದ್ರದ ಪ್ರತಿಷ್ಠಿತ ಕೇಂದ್ರ ಗೃಹಮಂತ್ರಿ ಪದಕಕ್ಕೆ  ಬಾಜನರಾದ ಕರ್ನಾಟಕ ಕಲಿಗಳು
bangalore , ಶುಕ್ರವಾರ, 12 ಆಗಸ್ಟ್ 2022 (17:15 IST)
ಪೊಲೀಸ್ ಇಲಾಖೆ ಉತ್ತಮ ತನಿಖೆ ನಡೆಸಿದ ಪೊಲೀಸರಿಗೆ ಸಲ್ಲುವ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಪ್ರತಿವರ್ಷ ನೀಡುವ ಈ ಉನ್ನತ ಪದಕಕ್ಕೆ ದೇಶದ ಎಲ್ಲಾ ರಾಜ್ಯಗಳಿಂದ ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದಿಲ್ಲ. ಪ್ರಸ್ತುತ ಈ ವರ್ಷ ದೇಶದಾದ್ಯಂತ ಸಿವಿಲ್ ಪೊಲೀಸ್ ಠಾಣೆಗೆ, ಎನ್ ಸಿಬಿ ಸೇರಿದಂತೆ 151 ಅಧಿಕಾರಿಗಳು ಈ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. 
 
ಇನ್ನೂ ಕರ್ನಾಟಕದಿಂದ ಆರು ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಎಸ್ಪಿ ಲಕ್ಷ್ಮೀಗಣೇಶ್, ಡಿವೈಎಸ್ಪಿ ವೆಂಕಟಪ್ಪ, ರಾಜೇಂದ್ರ, ಶಂಕರ್ ಕಲ್ಲಪ್ಪ ಮತ್ತು ಶಂಕರ ಗೌಡ ಹಾಗೂ ಸಿಪಿಐ ಗುರುಬಸವರಾಜು ಆಯ್ಕೆಯಾಗಿದ್ದಾರೆ. 
 
ಇನ್ನೂ ಅತ್ಯುತ್ತಮವಾಗಿ ತನಿಖೆ ನಡೆಸಿದ ಅಧಿಕಾರಿಗಳು ಮಾತ್ರ ಈ ಪದಕಕ್ಕೆ ಆಯ್ಕೆಯಾಗಿದ್ದರು. ಎಸ್ಪಿ ಲಕ್ಷ್ಮೀ ಗಣೇಶ ಈ ಹಿಂದೆ ಬೆಂಗಳೂರು ಗ್ರಾಮಾಂತರ ವರಿಷ್ಠಾಧಿಕಾರಿಯಾಗಿದ್ದ ಮೊದಲ ಬಾರಿಗೆ ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಎರಡು ಕೋಟಿ ಆಸ್ತಿಯನ್ನ ಫ್ರೀಜ್ ಮಾಡಿದ್ರು. ಅನೇಕ ನಿಷ್ಪಕ್ಷಪಾತ ತನಿಖೆಗಾಗಿ ಕೇಂದ್ರ ಸರ್ಕಾರ ನೀಡುವ ಈ ಗೌರವವನ್ನು ಲಕ್ಷ್ಮೀಗಣೇಶ್ ತಮ್ಮದಾಗಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಅಪಘಾತದ ದೃಶ್ಯ ಸಿಸಿಟಿಯಲ್ಲಿ ಸೆರೆ