Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಗೆ ಅಂಕುಶ ಹಾಕಲು ಸರ್ಕಾರದಿಂದ ಸದನ ಸಮಿತಿ ರಚನೆ

ಮಾಧ್ಯಮಗಳಿಗೆ ಅಂಕುಶ ಹಾಕಲು ಸರ್ಕಾರದಿಂದ ಸದನ ಸಮಿತಿ ರಚನೆ
ಬೆಂಗಳೂರು , ಮಂಗಳವಾರ, 28 ಮಾರ್ಚ್ 2017 (19:19 IST)
ಸುದ್ದಿ ಮಾಧ್ಯಮಗಳನ್ನ ನಿಯಂತ್ರಿಸಲು ಆರೋಗ್ಯ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಂಟಿ ಸದನ ಸಮಿತಿ ರಚಿಸಿದೆ.  ಈ ಸಮಿತಿಯಲ್ಲಿ ವಿಧಾನಸಭೆ ಮತ್ತು ಪರಿಷತ್`ನ ಎರಡೂ ಸದನಗಳ ಸದಸ್ಯರನ್ನ ನೇಮಿಸಲಾಗಿದೆ.

ಸಾ. ರಾ. ಮಹೇಶ್, ಭರಮಗೌಡ ಕಾಗೆ, ಸುರೇಶ್ ಗೌಡ, ಸೋಮಶೇಖರ್, ಶಿವರಾಜ್ ತಂಗಡಗಿ, ಎಸ್.ಎ. ಹ್ಯಾರಿಸ್ ಸೇರಿದಂತೆ ಸದನದಲ್ಲಿ ಮಾಧ್ಯಮಗಳ ವಿರುದ್ಧ ಆಕ್ಷೇಪ ಎತ್ತಿದ್ದ ಶಾಸಕರುಗಳೇ ಸದನದಲ್ಲಿದ್ದಾರೆ. ಈ ಹಿಂದೆಯೇ ಸ್ಪೀಕರ್ ಕೆ.ಬಿ. ಕೋಳಿವಾಡ ಸದನ ಸಮಿತಿ ರಚಿಸುವ ಬಗ್ಗೆ ಘೋಷಿಸಿದ್ದರು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮಾಧ್ಯಮಗಳಿಗೆ ಅಂಕುಶ ಹಾಕಲು ಸದನ ಸಮಿತಿ ರಚನೆ ಸರಿಯಲ್ಲ. ಮಾಧ್ಯಮಗಳ ಸ್ವಾತಂತ್ರ್ಯ ಮೊಟಕುಗೊಳಿಸುವುದು ಸೂಕ್ತವಲ್ಲ. ಪರ್ಯಾಯ ಮಾರ್ಗಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಂತೆ ಸ್ಪೀಕರ್`ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ಶಾಸಕರು ಮತ್ತು ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ವೈಯಕ್ತಿಕ ವಿಚಾರಗಳನ್ನ ಕೀಳುಮಟ್ಟದಲ್ಲಿ ತೋರಿಸಲಾಗುತ್ತಿದೆ ಎಂದು ಇತ್ತೀಚೆಗೆ ಶಾಸಕರು ಸದನದಲ್ಲಿ ಆಕ್ಷೇಪ ಎತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪರನ್ನು ಟೀಕಿಸಲು ಕಾಂಗ್ರೆಸ್‌ನವರಿಗೆ ಗಟ್ಟಿ ಗುಂಡಿಗೆ ಬೇಕು