Select Your Language

Notifications

webdunia
webdunia
webdunia
webdunia

ಕರ್ನಾಟಕ ಸಂಗೀತ ದಿಗ್ಗಜ ಎಂ ಬಾಲಮುರಳಿಕೃಷ್ಣ ನಿಧನ

ಕರ್ನಾಟಕ ಸಂಗೀತ ದಿಗ್ಗಜ ಎಂ ಬಾಲಮುರಳಿಕೃಷ್ಣ ನಿಧನ
ಚೆನ್ನೈ , ಮಂಗಳವಾರ, 22 ನವೆಂಬರ್ 2016 (17:54 IST)
ಅನಾರೋಗ್ಯದಿಂದ ಬಳುತ್ತಿದ್ದ ಕರ್ನಾಟಕ ಸಂಗೀತ ದಿಗ್ಗಜ ಎಂ ಬಾಲಮುರಳಿಕೃಷ್ಣ (86) ಅವರು ಇಂದು ಚೆನ್ನೈನ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಅನೇಕ ಚಲನಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದ ಎಂ ಬಾಲಮುರಳಿಕೃಷ್ಣ ಅವರು,  1930 ಜುಲೈ 6 ರಂದು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಶಂಕರಗುಪ್ತಂನಲ್ಲಿ ಜನಸಿದ್ದರು. ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
 
ಗಾಯನ, ಪಿಟೀಲು, ಮೃದಂಗ ಹಾಗೂ ಖಂಜಿರ ನುಡಿಸುತ್ತಿದ್ದ ಇವರು, 25 ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದರು. ಅದಲ್ಲದೆ ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಪಂಡಿತ ಭೀಮಸೇನ ಜೋಶಿ ಹಾಗೂ ಪರಿಪ್ರಸಾದ್ ಚೌರಾಸಿಯ ಸೇರಿ ಹಲವರೊಂದಿಗೆ  ಜುಗಲ್ಬಂದಿ ನಡೆಸುವವಲ್ಲಿ ಖ್ಯಾತರಾಗಿದ್ದರು.
 
ಕನ್ನಡ, ತಮಿಳು, ತೆಲಗು ಹಾಗೂ ಸಂಸ್ಕೃತ ಭಾಷೆಯಲ್ಲಿ 400ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಎಂ ಬಾಲಮುರಳಿಕೃಷ್ಣ ಅವರು, ಕನ್ನಡ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ಅಂತ್ಯವಲ್ಲ ಆರಂಭ, ಮುಂದೆ ಕಾದಿದೆ ಮಾರಿಹಬ್ಬ: ಪ್ರಧಾನಿ ಮೋದಿ