Webdunia - Bharat's app for daily news and videos

Install App

Karnataka By Election: ಕನಿಷ್ಠ ಶೇಕಡಾ ಮತ ಅಂತರದಿಂದ ಕಾಂಗ್ರೆಸ್ ಗೆದ್ದಿದೆ: ಪಿ. ರಾಜೀವ್

Sampriya
ಶನಿವಾರ, 23 ನವೆಂಬರ್ 2024 (14:56 IST)
Photo Courtesy X
ಬೆಂಗಳೂರು: ತುಷ್ಟೀಕರಣದ ಪರಾಕಾಷ್ಠೆ, ಸಚಿವರ ಮೇಲೆ ಹೇರಿದ ಒತ್ತಡ, ಆಡಳಿತ ಯಂತ್ರದ ಅಲ್ಪ ಮಟ್ಟಿನ ಸಹಕಾರ, ಕೊನೆ ಕ್ಷಣದಲ್ಲಿ ಕೊಟ್ಟ ಗ್ಯಾರಂಟಿಯ ಹಣದಿಂದ ಕಾಂಗ್ರೆಸ್ ಪಕ್ಷ ಅಲ್ಪ ಶೇಕಡಾವಾರು ಮತಗಳ ಅಂತರದಿಂದ ಗೆದ್ದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ವಿಶ್ಲೇಷಿಸಿದರು.

ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಯ ಫಲಿತಾಂಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಕರ್ನಾಟಕದ 3 ಉಪ ಚುನಾವಣೆಗಳಲ್ಲಿ 3 ಕಡೆಯೂ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅತಿ ಹೆಚ್ಚು ಶ್ರಮ ವಹಿಸಿದ್ದಾರೆ. ಎಲ್ಲ ನಾಯಕರೂ ಪಕ್ಷದ ಚುನಾವಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ವಿವರಿಸಿದರು.

ಆಡಳಿತ ಪಕ್ಷದ ಅಧಿಕಾರ, ಹಣದ ದುರುಪಯೋಗವನ್ನು ನಾವು ನೋಡುತ್ತಿದ್ದೆವು. ತುಷ್ಟೀಕರಣದ ಪರಾಕಾಷ್ಠೆಯನ್ನು ಮುಟ್ಟಿ ಒಂದು ವರ್ಗದ ಮತಗಳನ್ನು ಸಂಪೂರ್ಣವಾಗಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿತ್ತು. ಗಣಪತಿ ಉತ್ಸವದಲ್ಲಿ ಹಿಂದೂಗಳ ಭಾವನೆಗೆ ಪೆಟ್ಟು ಕೊಡುವ ಕೆಲಸ ನಡೆಯಿತು. ವಕ್ಫ್ ಕುರಿತ ತೀರ್ಮಾನಗಳು- ಇವೆಲ್ಲವೂ ಒಂದು ವರ್ಗದ ಮತ ಕ್ರೋಡೀಕರಣದ ಕಾಂಗ್ರೆಸ್ ಪ್ರಯತ್ನಕ್ಕೆ ಫಲ ಕೊಟ್ಟಿದೆ ಎಂದರು.

ತುಷ್ಟೀಕರಣವು ಪರಾಕಾಷ್ಠೆಯನ್ನು ಮುಟ್ಟಿದಾಗ ಜಾಗೃತ ಆಗಬೇಕಾದವರಲ್ಲಿ ಜಾಗೃತಿ ಮೂಡಿಸಲು ನಮಗೆ ಸಾಧ್ಯ ಆಗಲಿಲ್ಲವೇನೋ ಎಂದು ಅನಿಸುವುದಾಗಿ ತಿಳಿಸಿದರು. ತುಷ್ಟೀಕರಣದಿಂದ ಲಭಿಸುವ ಸುಮಾರು ಶೇ 13 ಮತಗಳಿರುವ ಕ್ಷೇತ್ರಗಳಿವು. ಅಲ್ಲಿ ಚುನಾವಣೆ ಗೆದ್ದಿರುವುದು ಶೇ 2.5ರಿಂದ 3 ರಷ್ಟು ಅಂತರದಿಂದ ಮಾತ್ರ ಎಂದು ತಿಳಿಸಿದರು.
ಒಂದೊಂದು ಗ್ರಾಮ ಪಂಚಾಯಿತಿಗೆ ಒಬ್ಬೊಬ್ಬ ಸಚಿವರಿಗೆ ಗುರಿ ಕೊಟ್ಟು, ಬೂತ್‍ಗಳಲ್ಲಿ ಇಷ್ಟು ಲೀಡ್ ಸಿಗದಿದ್ದರೆ ಸಚಿವ ಸ್ಥಾನವೇ ಬದಲಾಗುವ ಬೆದರಿಕೆ ಹಾಕಿದ್ದರು. ಆಡಳಿತ ಯಂತ್ರವು ಸಹಜವಾಗಿ ಸರಕಾರದ ಪರವಾಗಿ ಬಳಸಿಕೊಂಡಿರುವುದು ಮೂರನೇ ಕಾರಣ. ನಮ್ಮ ಪಕ್ಷದ ಪ್ರಚಾರಕ್ಕೆ ಅಡೆತಡೆ ಮಾಡಿದ್ದರು. ಕಾಂಗ್ರೆಸ್ ಪ್ರಚಾರಕ್ಕೆ ಸ್ವಲ್ಪ ಮಟ್ಟಿನ ಸಹಕಾರ ಕೊಟ್ಟಿದ್ದರು ಎಂದು ತಿಳಿಸಿದರು.

ಜನರಿಂದಲೇ ಕಿತ್ತುಕೊಂಡು ಜನರಿಗೆ ಕೊಡುವ ಗ್ಯಾರಂಟಿ; 2 ಸಾವಿರ ಕೊಡಲು ಅದೇ ಮನೆಯಿಂದ 4 ಸಾವಿರ ಕಿತ್ತುಕೊಳ್ಳುವುದು, ಮತದಾನಕ್ಕೆ 2 ದಿನ ಇರುವಾಗ 2 ಸಾವಿರ ಹಾಕಿದ್ದು ಕೂಡ ಕಾಂಗ್ರೆಸ್ ಗೆಲುವಿಗೆ ಇನ್ನೊಂದು ಕಾರಣ ಎಂದರು. ಇದೆಲ್ಲವೂ ನಮ್ಮ ಸೋಲಿಗೆ ಕಾರಣ ಎಂದು ತಿಳಿಸಿದರು.

ಕನಿಷ್ಠ ಶೇಕಡಾವಾರು ಮತಗಳ ಅಂತರದಿಂದ ಕಾಂಗ್ರೆಸ್ ಗೆದ್ದಿದ್ದು, ಇದು ಸರಕಾರದ ವಿರುದ್ಧ ಇರುವ ಜನಾಭಿಪ್ರಾಯವನ್ನು ತೋರಿಸುತ್ತದೆ ಎಂದು ಹೇಳಿದರು. ಮಹಾರಾಷ್ಟ್ರದ ಜನತೆ ಬಿಜೆಪಿ ಮೈತ್ರಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಜಾರ್ಖಂಡ್‍ನಲ್ಲೂ ಅಂತಿಮ ಸುತ್ತಿನ ಫಲಿತಾಂಶ ಬಂದಾಗ ಅಲ್ಲಿಯೂ ಬಿಜೆಪಿ ಬಹುಮತದತ್ತ ಸಾಗುವ ವಿಶ್ವಾಸ ಇದೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments