Daily Horoscope
✕

ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಗೇಟ್ ಕಾದರೂ ಪ್ರಯೋಜನವಿಲ್ಲ: ಡಿಕೆಶಿಗೆ ಬಿಜೆಪಿ ಟಾಂಗ್

ಕೃಷ್ಣವೇಣಿ ಕೆ
ಶನಿವಾರ, 25 ಏಪ್ರಿಲ್ 2026 (10:58 IST)
ಬೆಂಗಳೂರು: ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ ಹೈಕಮಾಂಡ್ ಮನೆ ಗೇಟ್ ಕಾದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದೆ.

ಡಿಕೆ ಶಿವಕುಮಾರ್ ನಿನ್ನೆ ದೆಹಲಿ ಪ್ರವಾಸ ಮಾಡಿದ್ದರು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ಬಳಿಕ ಹೈಕಮಾಂಡ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.

ಡಿಕೆ ಶಿವಕುಮಾರ್ ಸಿಎಂ ಪದವಿಗಾಗಿ ಹೈಕಮಾಂಡ್ ನಾಯಕರನ್ನು ಪದೇ ಪದೇ ಭೇಟಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿವಿದಿದೆ. ರಾಜ್ಯದಲ್ಲಿ ಕ್ಯಾಬಿನೆಟ್ ಸಭೆಯಿತ್ತು. ಆದರೆ ಇದನ್ನು ಬಿಟ್ಟು ದೆಹಲಿಗೆ ತರಾತುರಿಯಲ್ಲಿ ಹೋಗಿರುವುದನ್ನು ವ್ಯಂಗ್ಯ ಮಾಡಿದೆ.

‘ಅತ್ಯಂತ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬೇಕಿದ್ದ ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ, ದೆಹಲಿಯ ಹೈಕಮಾಂಡ್ ನಾಯಕರ ಮನೆಯ ಗೇಟ್ ಕಾಯುವುದೆಂದರೆ, ಡಿಸಿಎಂ
ಡಿಕೆ ಶಿವಕುಮಾರ್ ಅವರಿಗೆ ಬಲು ಇಷ್ಟ ಅಲ್ವಾ’ ಎಂದು ಟಾಂಗ್ ಕೊಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಂಜೆ ಮಳೆ ಮುನ್ಸೂಚನೆ

ಬೆಂಗಳೂರು ವೋಟ್ ಚೋರಿ ಪ್ರತಿಭಟನೆಯಲ್ಲಿ ಫ್ರೀ ಪ್ಯಾಲೆಸ್ತೀನ್ ಸ್ಲೋಗನ್: ಇದೇನು ಭಾರತ ವಿರೋಧಿ ಹೋರಾಟವೇ ಎಂದ ನೆಟ್ಟಿಗರು

ಚುನಾವಣಾ ಆಯೋಗದ ಪರ ನಿಂತ 42 ಮಾಜಿ ನ್ಯಾಯಾಧೀಶರು: ಬಹಿರಂಗ ಪತ್ರದ ಮೂಲಕ ಎಚ್ಚರಿಕೆ

ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಾಶ್ಮೀರಿ ಯುವಕನ ಮೇಲೆ ಹಲ್ಲೆ: Video

ದೆಹಲಿ ಪೊಲೀಸರಿಂದ ಗೂಂಡಾಗಿರಿ, ಅಕ್ಟೋಬರ್ 10ರಿಂದ ಮತ ಉಳಿಸಿ ದೇಶ ಉಳಿಸಿ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್

ಮುಂದಿನ ಸುದ್ದಿ
Show comments