Daily Horoscope
✕

ಬಸ್ ಪ್ರಯಾಣ ದರದ ವಿರುದ್ಧ ಭಿಕ್ಷೆ ಪಾತ್ರೆ ಹಿಡಿದು ಪ್ರತಿಭಟನೆ ಮಾಡಿದ ಬಿಜೆಪಿ

ಕೃಷ್ಣವೇಣಿ ಕೆ
ಗುರುವಾರ, 5 ನವೆಂಬರ್ 2026 (16:08 IST)
ಬೆಂಗಳೂರು: ಸರಕಾರಿ ಬಸ್‍ಗಳ ಪ್ರಯಾಣದರ ಏರಿಸಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ವತಿಯಿಂದ ಇಂದು ನಗರದ ಮೆಜೆಸ್ಟಿಕ್ ಬಳಿ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು. 
 
ಬಸ್ ಪ್ರಯಾಣದರ ಏರಿಕೆಯನ್ನು ಖಂಡಿಸಿದ ನಗರದ ಮೆಜೆಸ್ಟಿಕ್‍ನಲ್ಲಿ ಇಂದು ಬಿಜೆಪಿ ವತಿಯಿಂದ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್. ಅಶೋಕ್ ಅವರು ಸರಕಾರವು ಗ್ಯಾರಂಟಿ ಸಂಬಂಧ ಸುಮಾರು ಐದಾರು ಸಾವಿರ ಕೋಟಿ ಹಣ ಕೊಡಬೇಕು. ಆ ಫ್ರೀ ಗ್ಯಾರಂಟಿಯಿಂದ ಹಣ ಕೊಡುವ ಯೋಗ್ಯತೆ ಇಲ್ಲದೆ ಜನರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
 
ಗ್ಯಾರಂಟಿ ಸ್ಕೀಮ್‍ಗೆ ಹಣ ಅವರಿಗೆ ಒಂದು ಪೈಸಾ ಕ್ರೋಡೀಕರಣ ಮಾಡಲು ಆಗುತ್ತಿಲ್ಲ. ಜನರ ಮೇಲೆ ಅದನ್ನ ತೆರಿಗೆ ರೂಪದಲ್ಲಿ ಹಾಕುವ ದುಷ್ಟ ಸರ್ಕಾರ ಇದು ಎಂದು ಆಕ್ಷೇಪಿಸಿದರು. ಇದೊಂದು ಲೂಟಿ ಸರ್ಕಾರ ಎಂದು ದೂರಿದರು.
 
ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಸರ್ಕಾರ ಬಂದಮೇಲೆ ಪೆಟ್ರೋಲ್ ಮತ್ತು ಡೀಸೆಲ್‍ನಿಂದಾನೇ ಐದರಿಂದ ಆರು ಸಾವಿರ ಕೋಟಿ ಹಣ ಇವರ ಖಜಾನೆಗೆ ಬಂದಿದೆ. ಇದನ್ನ ವಾಪಸ್ ಕೊಡಿ. ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆ ಅಂತೀರಲ್ಲ, ಅದರಿಂದ ಹಣ ಬಂದಿದೆಯಲ್ಲ ವಾಪಸ್ ಕೊಡಿ. ಕೊಡೋಕೆ ಯೋಗ್ಯತೆ ಇಲ್ಲ. ಸರ್ಕಾರ ದಿವಾಳಿಯಾಗಿದೆ, ಸಂಬಳ ಕೊಡೋಕೂ ದುಡ್ಡಿಲ್ಲ ಎಂದು ಖಂಡಿಸಿದರು.
 
ಹಾಲು, ಮೊಸರು, ತುಪ್ಪದ ದರ ಏರಿಸಿದ್ದಾರೆ. ಜನಸಾಮಾನ್ಯ ಏನು ಮಾಡಬೇಕು ಎಂದು ಕೇಳಿದರು. ಇವತ್ತು ಸಾರಿಗೆ ಇಲಾಖೆ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆಯನ್ನು ಮುಚ್ಚುವ ಅಂತ ಸ್ಥಿತಿಗೆ ತಂದಿದ್ದಾರೆ. ಇವತ್ತು ಬಸ್‍ಗಳಿಗೆ ಟೈರ್ ಇಲ್ಲ, ಟ್ಯೂಬ್ ಇಲ್ಲ, ಹ್ಯಾಂಡಲ್ ಇಲ್ಲ, ಸ್ಟೇರಿಂಗ್ ಇಲ್ಲ, ಬ್ಯಾಟರಿ ಇಲ್ಲ. ಓಡೋದೇ ಇಲ್ಲ, ತಳ್ಳೋ ಬಸ್‍ಗಳು ಇವೆ ಎಂದು ಟೀಕಿಸಿದರು. 
 
ಒಂದು ನೀತಿಗೆಟ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವತ್ತು ಜನರನ್ನ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದರು. ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
 

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೌದಪ್ಪಾ ನಾನು ಹಳ‍್ಳಿ ಗುಗ್ಗು, ರೈತರ ಮಗ.. ಪ್ರಿಯಾಂಕ್ ಖರ್ಗೆಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು

ಪೆಟ್ರೋಲ್ ಬೆಲೆ, ಗೊಬ್ಬರ ಬೆಲೆ, ಸಿಲಿಂಡರ್ ಬೆಲೆ ಎಲ್ಲಾ ಇಳಿಸ್ತೀವಿ ಎಂದಿದ್ದ ಸಿದ್ದರಾಮಯ್ಯ ವಿಡಿಯೋ ಈಗ ಫುಲ್ ವೈರಲ್ Video

ಹೋಟೆಲ್ ನ ಕಿಟಿಕಿಯಲ್ಲಿ ಕೂತಿದ್ದ ಯುವತಿ ಕೆಳಕ್ಕೆ ಬಿದ್ದು ಸಾವು: ನೋಡುತ್ತಾ ನಿಂತಿದ್ದ ಬಾಯ್ ಫ್ರೆಂಡ್ Video

ಈ ಕರ್ಮಕ್ಕೆ ಉಚಿತ ಗ್ಯಾರಂಟಿ ಯಾಕೆ ಬೇಕಿತ್ತು: KSRTC ಬಸ್ ದರ ಏರಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಜನಸಾಮಾನ್ಯರ ಆಕ್ರೋಶ

ಟೀಚರ್ ಮುಂದೆ ನಿಂತಿದ್ದ ಹುಡುಗಿ ನೋಡುತ್ತಿದ್ದಂತೇ ಕುಸಿದು ಪ್ರಾಣವನ್ನೇ ಬಿಟ್ಟಳು: ಆಘಾತಕಾರೀ ಕ್ಷಣದ video

ಮುಂದಿನ ಸುದ್ದಿ
Show comments