ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗುವ ಶಾಸಕರು ಮತ್ತು ಸಚಿವರಿಗೆ ಬಿಸಿ ಮುಟ್ಟಿಸಲು ಸ್ಪೀಕರ್ ಕೋಳಿವಾಡ ನಿರ್ಧರಿಸಿದ್ದಾರೆ. ಗೈರು ಹಾಜರಾದ ಸಚಿವರು, ಶಾಸಕರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಮರ್ಯಾದೆ ಕಳೀತಾರಂತೆ.
ಯಾರೆಲ್ಲಾ ಗೈರು ಹಾಜರಾಗುತ್ತಾರೋ ಅವರ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಐಡಿಯಾ ಮಾಡಿದ್ದಾರೆ ಸ್ಪೀಕರ್. ಹಾಗಾದರೂ ಶಾಸಕಾಂಗ ಸಭೆಯಲ್ಲಿ ಜನ ಪ್ರತಿನಿಧಿಗಳು ಭಾಗವಹಿಸಿಯಾರೆಂಬ ಲೆಕ್ಕಾಚಾರ ಸ್ಪೀಕರ್ ಅವರದ್ದು.
ಆದರೆ ಸ್ಪೀಕರ್ ಬಿಡುಗಡೆ ಮಾಡದಿದ್ದರೂ, ಮಾಧ್ಯಮಗಳು ಇದುವರೆಗೆ ಅವರ ಹೆಸರು ಹೇಳುತ್ತಿದ್ದವು. ಆದರೂ ಜನಪ್ರತಿನಿಧಿಗಳು ತಮ್ಮ ನಡತೆ ತಿದ್ದಿಕೊಂಡಿಲ್ಲ. ಆದರೆ ಸ್ಪೀಕರ್ ಇನ್ನು ಮುಂದೆ,ಯಾವ್ಯಾವ ಚರ್ಚೆ ಸಮಯದಲ್ಲಿ ಯಾವ್ಯಾವ ಸಚಿವರು, ಶಾಸಕರು ಇರಬೇಕೆಂದೂ ಕಟ್ಟಪಟ್ಟಣೆ ಹೊರಡಿಸಲಿದ್ದಾರಂತೆ. ಇದೆಲ್ಲಾ ಎಷ್ಟು ಸಕ್ಸಸ್ ಆಗುತ್ತದೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ