Publish Date: Mon, 05 Jun 2017 (08:40 IST)
Updated Date: Mon, 05 Jun 2017 (08:42 IST)
ಬೆಂಗಳೂರು: ಇಲಾಖಾವಾರು ಯೋಜನೆಗಳ ಚರ್ಚೆಗಾಗಿ ಕರೆಯಲಾಗಿರುವ ವಿಧಾನಮಂಡಲದ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಯಥಾವತ್ತು ಯೋಜನೆಗಳ ಚರ್ಚೆಗಿಂತ ಹೆಚ್ಚು ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಗದ್ದಲವೆಬ್ಬಿಸುವುದಂತೂ ಖಂಡಿತಾ.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು, ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ ಎನ್ನುವ ವಿಷಯಗಳನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ.