Select Your Language

Notifications

webdunia
webdunia
webdunia
webdunia

ದ್ವಿತೀಯ ಪಿಯುಸಿ ಪರೀಕ್ಷಾ ಅವಧಿಯಲ್ಲಿ 15ನಿಮಿಷ ಕಡಿತ

ದ್ವಿತೀಯ ಪಿಯುಸಿ ಪರೀಕ್ಷಾ ಅವಧಿಯಲ್ಲಿ 15ನಿಮಿಷ ಕಡಿತ

Sampriya

ಬೆಂಗಳೂರು , ಗುರುವಾರ, 12 ಸೆಪ್ಟಂಬರ್ 2024 (20:13 IST)
Photo Courtesy X
ಬೆಂಗಳೂರು: ಹೊಸ ನಿಯಮದಂತೆ ಇನ್ಮುಂದೆ ದ್ವಿತೀಯ ಪಿಯು ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.

ಈ ಹಿಂದೆ ಮೂರು ಗಂಟೆಯಿದ್ದ ಪರೀಕ್ಷಾ ಅವಧಿ 2 ಗಂಟೆ 45 ನಿಮಿಷ ಇರಲಿದೆ. ಪರೀಕ್ಷೆಗೆ ಉತ್ತರ ಬರೆಯುವ ಅವಧಿಯನ್ನು 2 ಗಂಟೆ 45 ನಿಮಿಷ ನಿಗದಿ ಮಾಡಿದ್ದರೂ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಓದಿಕೊಳ್ಳಲು ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ವಿದ್ಯನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ ಸೇರಿದಂತೆ ಪ್ರಾಯೋಗಿಕ ಪರೀಕ್ಷೆ ಇರುವ  ಕೆಲ ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು 70 ಅಂಕಗಳಿಗೆ ಹಾಗೂ ಪ್ರಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾನ್ಪುರ:ಮಹಿಳೆಯ ರುಂಡವಿಲ್ಲದ ಬೆತ್ತಲೆ ಮೃತದೇಹ ಹೆದ್ದಾರಿ ಬಳಿ ಪತ್ತೆ