ಕಾರ್ಕಳ: ಮುಖ್ಯ ಶಿಕ್ಷಕರು ಹೇಳಿದ್ರೂ ಕೇಳದೇ ಜನಿವಾರ, ದಾರ ತೆಗೆಸುತ್ತಿದ್ದ ಶಿಕ್ಷಕ ಅಮಾನತು

Krishnaveni K
ಮಂಗಳವಾರ, 18 ನವೆಂಬರ್ 2025 (10:19 IST)
Photo Credit: X
ಉಡುಪಿ: ಮುಖ್ಯ ಶಿಕ್ಷಕರು, ಪೋಷಕರು ಬುದ್ಧಿ ಹೇಳಿದರೂ ಕೇಳದೇ ವಿದ್ಯಾರ್ಥಿಗಳ ಜನಿವಾರ, ಪವಿತ್ರ ದಾರಗಳನ್ನು ತೆಗೆಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಕಾರ್ಕರಳದ ಮಿಯ್ಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕ ಮದರಸಾ ಎಸ್ ಮಕಂದರ್ ಎಂಬಾತನನ್ನು ವಜಾಗೊಳಿಸಲಾಗಿದೆ. ಕಲಬುರಗಿ ಮೂಲದವನಾದ ಆತ ಈ ವರ್ಷ ಜೂನ್ ನಲ್ಲಿ ಅತಿಥಿ ಶಿಕ್ಷಕನಾಗಿ ಸೇರ್ಪಡೆಯಾಗಿದ್ದ.

ವಿದ್ಯಾರ್ಥಿಗಳು ಜನಿವಾರ ಧರಿಸಿದ್ದರೆ ಅಥವಾ ಪವಿತ್ರ ದಾರಗಳನ್ನು ಕೈಗೆ ಕಟ್ಟಿಕೊಂಡಿದ್ದರೆ ಈತ ತೆಗೆಯಲು ಹೇಳುತ್ತಿದ್ದ. ಕೇಳದೇ ಇದ್ದರೆ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಗಳನ್ನು ಕೊಡುತ್ತಿದ್ದ.  ಈ ಬಗ್ಗೆ ಪೋಷಕರು ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು. ಹೀಗಾಗಿ ಮುಖ್ಯ ಶಿಕ್ಷಕರೂ ಹಲವು ಬಾರಿ ಈತನಿಗೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೂ ಆತ ತನ್ನ ಖಯಾಲಿ ಮುಂದುವರಿಸಿದ್ದ.

ಇದೀಗ ಹೇಳಿದರೂ ಕೇಳದ ಶಿಕ್ಷಕನನ್ನು ಅಮಾನತಗೊಳಿಸಲಾಗಿದೆ. ಜನಿವಾರ ಆಗಲೀ, ಕೈಗೆ ಕಟ್ಟು ದಾರಗಳಾಗಲೀ ಆಯಾ ಧರ್ಮದವರಿಗೆ ವಿಶೇಷವಾದ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಇದನ್ನು ಪ್ರಶ್ನಿಸುವುದು ಅಥವಾ ಕಿತ್ತು ಹಾಕುವಂತೆ ಹೇಳುವಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಂತೆ. ಜನಿವಾರ ಎಂದರೆ ಏನು ಎಂದು ಈ ಶಿಕ್ಷಕನಿಗೆ ಕೇಳಿದರೆ ಅದು ಗೊತ್ತಿಲ್ಲ ಅಂತಾನೆ. ಇನ್ನೊಬ್ಬರ ಧಾರ್ಮಿಕ ಭಾವನೆ ಬಗ್ಗೆ ಸ್ವಲ್ಪವೂ ಗೌರವವಿಲ್ಲದ ಇಂತಹ ಶಿಕ್ಷಕರು ಸೇವೆಯಲ್ಲಿರಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜೀನ್ಸ್ ಪಾರ್ಕ್ ಎಲ್ಲಪ್ಪ: ರಾಹುಲ್ ಗಾಂಧಿಗೆ ಪ್ರಶ್ನಿಸಿದ ಆರ್ ಅಶೋಕ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನಿತೀಶ್ ಕುಮಾರ್ ಇಂದು 10 ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ: ಯಾರೆಲ್ಲಾ ಭಾಗಿಯಾಗಲಿದ್ದಾರೆ

ಮುಂದಿನ ಸುದ್ದಿ
Show comments