ಕನ್ನಡ ರಾಜ್ಯೋತ್ಸವ: ಇಂದು ಪ್ರಶಸ್ತಿ ವಿತರಣೆ ಎಷ್ಟು ಗಂಟೆಗೆ, ಎಲ್ಲಿ ಇಲ್ಲಿದೆ ಮಾಹಿತಿ

Krishnaveni K
ಶನಿವಾರ, 1 ನವೆಂಬರ್ 2025 (08:50 IST)
ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ. ಈ ದಿನದಂದು ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಇದು ಎಷ್ಟು ಗಂಟೆಗೆ, ಎಲ್ಲಿ ನಡೆಯಲಿದೆ ಇಲ್ಲಿದೆ ಮಾಹಿತಿ.

1956 ರಲ್ಲಿ ಮೈಸೂರು ಸಂಸ್ಥಾನವು ಕರ್ನಾಟಕವೆಂದು ರೂಪುಗೊಂಡಿದ್ದು ಇದೇ ದಿನ. ಈ ಕಾರಣಕ್ಕೆ ಪ್ರತೀ ವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.  ದಸರಾ ನಾಡಹಬ್ಬವಾಗಿದ್ದರೆ, ರಾಜ್ಯೋತ್ಸವ ಕನ್ನಡದ ಹಬ್ಬವಾಗಿದೆ.

ಇನ್ನು, ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡದ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳ ಒಟ್ಟು 70 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಅವರಿಗೆ ಇಂದು ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಲಿದ್ದಾರೆ.

ಇಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಪ್ರಶಸ್ತಿ ವಿಜೇತರನ್ನು  ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ. ನಟ ಪ್ರಕಾಶ್ ರಾಜ್, ಸೂಲಗಿತ್ತಿ ಈರಮ್ಮ, ಕೋಣಂದೂರು ಲಿಂಗಪ್ಪ, ರಹಮತ್ ತರೀಕೆರೆ ಸೇರಿದಂತೆ ಅನೇಕ ಸಾಧಕರನ್ನು ಇಂದು ಸಿಎಂ ಸನ್ಮಾನಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ ಥರಾ ಟರ್ಪಲ್ ಹಾಕಿ ಬಡತನ ಮುಚ್ಚಿಡಲ್ಲ: ಬಿಜೆಪಿಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ರೈತರಿಗಾಗಿ ನಾಳೆ ನನ್ನ ಜನ್ಮದಿನವಾಗಿದ್ದರೂ ಹೋರಾಟಕ್ಕೆ ರೆಡಿ: ಬಿವೈ ವಿಜಯೇಂದ್ರ

ಅತ್ಯಂತ ನಿಷ್ಠಾವಂತ ರಾಜಕಾರಣಿ: ಹೆಚ್‌ವೈ ಮೇಟಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬಿಹಾರ ಚುನಾವಣೆ: ರಾಜ್ಯದಲ್ಲಿರುವ ಬಿಹಾರಿಗಳಿಗೆ ವೇತನ ಸಹಿತ ರಜೆಗೆ ಶಿವಕುಮಾರ್ ಮನವಿ

ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕರೆತರಲು ಹೊರಟ ಮತ್ತೊಂದು AI ವಿಮಾನ

ಮುಂದಿನ ಸುದ್ದಿ
Show comments