ಕನ್ನಡದ ಖ್ಯಾತ ಕಾಮಿಡಿ ನಟನ ಸಹೋದರ ಅರೆಸ್ಟ್

Webdunia
ಶನಿವಾರ, 1 ಅಕ್ಟೋಬರ್ 2022 (14:02 IST)
ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
10 ಲಕ್ಷ ರೂ. ಸಾಲ‌ ಕೊಡಿಸಲು 4 ಲಕ್ಷ ಕಮಿಷನ್ ಹಣ ಕೊಡಬೇಕೇಂದು ದೀಪಿಕಾ, ಪ್ರದೀಪ್ ಪಾವಗಡಗೆ ಬೇಡಿಕೆ ಇಟ್ಟಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಪ್ರದೀಪ್, ದೀಪಿಕಾ ಮೊಬೈಲ್​​ನಲ್ಲಿ ಮಾತನಾಡಿದ್ದ ಆಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದೇ ಆಡಿಯೋ ಇಟ್ಟುಕೊಂಡು ಪಾಲಿಕೆ ಸಿಬ್ಬಂದಿ ದೀಪಿಕಾಗೆ 4 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ.
 
ತನ್ನ ಬಳಿಯಿದ್ದ ಮೂವರು ಯುವತಿಯರನ್ನು ಬಿಟ್ಟು, ನಾವು ಆರ್​ಟಿಐ ಕಾರ್ಯಕರ್ತರು ನೀವು ಹಣ ಕೊಟ್ಟಿಲ್ಲ ಅಂದ್ರೆ, ನಿಮ್ಮನ್ನ ಕೆಲಸದಿಂದ ವಜಾಗೊಳಿಸುವಂತೆ ಮಾಡುತ್ತೇವೆ ಎಂದು 4 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡಲಿಲ್ಲ ಅಂದ್ರೆ ತನ್ನ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸೋದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಆ ಸಿಬ್ಬಂದಿಗೆ ಬೆದರಿಕೆ ಇಟ್ಟಿರುವ ಆರೋಪ ಪ್ರದೀಪ್​ ಪಾವಗಡ ವಿರುದ್ಧ ಕೇಳಿಬಂದಿದೆ.
 
ಯಾವಾಗ ಹಣ ಕೊಡಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಾಗ‌, ಪಾಲಿಕೆ ಕಚೇರಿಯ ಕೊಠಡಿಯಲ್ಲಿ ದೀಪಿಕಾರನ್ನು ಕೂಡಿ ಹಾಕಿ ಹಣ ಕೊಡುವಂತೆ ಬ್ಲಾಕ್ ಮೇಲ್‌ ಮಾಡಿದ್ದಾರೆ ಎನ್ನಲಾಗಿದೆ. ಕೂಡಲೇ ಪಾಲಿಕೆ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಹಣ ವಸೂಲಿಗೆ ಬಂದಿದ್ದ ಪ್ರದೀಪ್ ಪಾವಗಡ ಹಾಗೂ ಆತನ ಜೊತೆಯಿದ್ದ ಮೂವರು ಯುವತಿಯರಿಗೆ ಪಾಲಿಕೆಯ ಮಧ್ಯವರ್ತಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
 
ಚಪ್ಪಲಿಯಿಂದ ಮಂಜು ಪಾವಗಡ ಸಹೋದರನಿಗೆ ಪಾಲಕೆ ಮಧ್ಯವರ್ತಿಗಳು ಥಳಿಸಿದ್ದಾರೆ. ಕೂಡಲೇ ತುಮಕೂರು ನಗರ ಠಾಣೆ ಪೊಲೀಸರಿಗೆ ನಾಲ್ವರನ್ನು ಒಪ್ಪಿಸಿದ್ದಾರೆ. ಸದ್ಯ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿಗಾಗಿ ಗುದ್ದಾಟದ ನಡುವೆ ಆ ಸ್ಥಾನ ಬೇಕಾಗಿಲ್ಲವೆಂದ ಸಂತೋಷ್ ಲಾಡ್‌

ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ: ತಮಿಳುನಾಡಿನಲ್ಲಿ 7ಮಂದಿ ಸಾವು, 40 ಮಂದಿಗೆ ಗಂಭೀರ ಗಾಯ

ಅರೆಭಾಷೆಯಂತಹ ಪ್ರಾದೇಶಿಕ ಭಾಷೆ ಕನ್ನಡವನ್ನು ಶ್ರೀಮಂತಗೊಳಿಸಿದೆ: ಸಿದ್ದರಾಮಯ್ಯ

ಸಿಎಂ, ಡಿಸಿಎಂ ಒಗ್ಗಟ್ಟು ನೋಡಿ ಖುಷಿಯಾಯಿತು: ಸಂತೋಷ್ ಲಾಡ್

ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗ್ತೀದ್ರಾ: ಕುಮಾರಸ್ವಾಮಿಗೆ ಶಿವಕುಮಾರ್ ಪ್ರಶ್ನೆ

ಮುಂದಿನ ಸುದ್ದಿ
Show comments