Select Your Language

Notifications

webdunia
webdunia
webdunia
webdunia

ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿಗೆ 22 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಆದೇಶ

ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿಗೆ 22 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಆದೇಶ
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2022 (16:09 IST)
ನ್ಯಾಯಾಲಯದ ಆದೇಶದ ಹೊರತಾಗಿಯೂ ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್​, ನ್ಯಾಯಾಂಗ ನಿಂದನೆಯಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 5 ತಿಂಗಳು ಜೈಲು ಶಿಕ್ಷೆ ಹಾಗೂ 2 ಸಾವಿರ ರೂ.
ಪತ್ನಿಯ ಜೀವನ ನಿರ್ವಹಣೆಗೆ ಹಣ ನೀಡುವಂತೆ ನ್ಯಾಯಾಲಯದ ನಿರ್ದಿಷ್ಟ ಆದೇಶವಿರುವಾಗ ವಯಸ್ಸಾದ ತಂದೆ-ತಾಯಿಯ ಜತೆಗೆ ಪತ್ನಿಯಾದವಳ ಜೀವನ ನಿರ್ವಹಣೆಯನ್ನೂ ನೋಡಿಕೊಳ್ಳುವ ಹೊಣೆ ಆರೋಪಿಯ ಮೇಲಿದೆ. ಕೋರ್ಟ್​ ಆದೇಶವಾಗಿ 10 ವರ್ಷಗಳೇ ಕಳೆದರೂ ಪತ್ನಿಗೆ ಹಣ ಪಾವತಿಸಿಲ್ಲ. ಈ ಮೂಲಕ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಲಾಗಿದೆ. ಉದ್ದೇಶಪೂರ್ವಕವಾಗಿ ಕೋರ್ಟ್​ ಆದೇಶಗಳನ್ನು ಉಲ್ಲಂಘಿಸಿರುವ ಆರೋಪಿ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಂಗದ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಅತಿ ಸೂಕ್ಷ್ಮವಾಗಿ ವರ್ತಿಸಬಾರದು. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನೋಡಿಕೊಂಡು ದಿವ್ಯ ಮೌನ ವಹಿಸಬೇಕೆಂದೂ ಅರ್ಥವಲ್ಲ. ನ್ಯಾಯದೇಗುಲದ ಘನತೆಯನ್ನು ಕುಗ್ಗಿಸಲು ಯಾರೊಬ್ಬರಿಗೂ ಅನುಮತಿಸಬಾರದು. ನ್ಯಾಯಾಲಯದ ಗೌರವದ ವಿಚಾರದಲ್ಲಿ ಯಾವುದೇ ರಾಜಿ ಅಥವಾ ಮೃದುತ್ವಕ್ಕೆ ಅವಕಾಶ ಇರಬಾರದು ಎಂದು ಹೈಕೋರ್ಟ್​ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಅಟಾರ್ನಿ ಜನರಲ್ ಯಾಗಿ ಆರ್. ವೆಂಕಟರಮಣಿ ನೇಮಕ