Publish Date: Wed, 03 Jan 2024 (18:00 IST)
Updated Date: Wed, 03 Jan 2024 (17:54 IST)
ಕೇರಳದಿಂದ ಬಂದ 4 ಯುವಕರ ಗುಂಪೊಂದು ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವಾಗ ಗ್ರಾಮವೊಂದರಲ್ಲಿ ಕಾರು ಅಪಘಾತ ಮಾಡಿದ್ದು, ಅಲ್ಲಿ ಅಪ್ರಾಪ್ತ ಹುಡುಗಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ, ಕಾರಿನಲ್ಲಿದ್ದ ಎಲ್ಲ ಯುವಕರಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ.