Publish Date: Mon, 28 Mar 2016 (18:57 IST)
Updated Date: Mon, 28 Mar 2016 (19:01 IST)
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಪರ ಸರ್ವಾನುಮತ ನಿರ್ಣಯಕ್ಕೆ ಆಗ್ರಹಿಸಿ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ಕುರಿತು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಯೋಜನೆಯ ಪರ ಸರ್ವಾನುಮತ ನಿರ್ಣಯವಾಗಬೇಕು, ಇಡಿ ಸದನ ಯೋಜನೆ ಪರವಾಗಿದೆ ಎಂದು ನಿರ್ಣಯವಾಗಬೇಕೆಂದು ಪಟ್ಟು ಹಿಡಿದು ನವಲಗುಂದ ಜೆಡಿಎಸ್ ಶಾಸಕ ಕೋನರೆಡ್ಡಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.
ಜೆಡಿಎಸ್ ಸದಸ್ಯರು ಯೋಜನೆ ಜಾರಿ ಕುರಿತು ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸದನದಲ್ಲಿ ಯೋಜನೆ ಕುರಿತು ಸರಕಾರ ನಿರ್ಣಯ ಮಂಡಿಸಲು ತೀರ್ಮಾನಿಸಿದೆ.