ವ್ಯಕ್ತಿಯೋರ್ವ ತನ್ನ ಹೆತ್ತ ತಾಯಿ ಹಾಗೂ ಸಹೋದರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಹೇಯ ಕೃತ್ಯ ಕಲಬುರ್ಗಿ ಜಿಲ್ಲೆಯ ವಡ್ಡರ ಗಲ್ಲಿಯಲ್ಲಿ ವರದಿಯಾಗಿದೆ.
ಆನಂದ ಎಂಬ ದುರುಳ ತನ್ನ ಹೆತ್ತ ತಾಯಿ ಗಂಗಮ್ಮ ಹಾಗೂ ತನ್ನ ಸಹೋದರಿ ಭೀಮಬಾಯಿ ಎನ್ನುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಹಿಂದೆಯೂ ಆನಂದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಆನಂದ ತನ್ನ ತಾಯಿ ಹಾಗೂ ಸಹೋದರಿಯ ಬಳಿ ಹೆಂಡ ಕುಡಿಯಲು 500 ರೂಪಾಯಿ ಕೇಳಿದ್ದು, ಅವರು ಹಣ ನೀಡಲು ನಿರಾಕರಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಆನಂದ ಈ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ