Select Your Language

Notifications

webdunia
webdunia
webdunia
webdunia

ಕೆ.ಎಸ್.ಈಶ್ವರಪ್ಪಗೆ ಕುರುಬ ಸಮಾಜದ ಒಲವಿಲ್ಲ: ವರ್ತೂರ್ ಪ್ರಕಾಶ್

ಕೆ.ಎಸ್.ಈಶ್ವರಪ್ಪಗೆ ಕುರುಬ ಸಮಾಜದ ಒಲವಿಲ್ಲ: ವರ್ತೂರ್ ಪ್ರಕಾಶ್
ಬೆಂಗಳೂರು , ಬುಧವಾರ, 28 ಸೆಪ್ಟಂಬರ್ 2016 (17:29 IST)
ಕುರುಬ ಸಮಾಜದೊಂದಿಗೆ ಎಂದಿಗೂ ಗುರುತಿಸಿಕೊಳ್ಳದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿಯಾಗುವ ಉದ್ದೇಶ ಹೊಂದಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಆರೋಪಿಸಿದ್ದಾರೆ.
 
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬ ಸಮಾಜದೊಂದಿಗೆ ಗುರುತಿಸಿಕೊಳ್ಳದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಮುಖ್ಯಮಂತ್ರಿಯಾಗಲು ಮುಂದಾಗಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿಯಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕುರುಬ ಸಮಾಜಕ್ಕೆ ಸೂಕ್ತ ನಾಯಕರು. ಹೀಗಾಗಿ ಕುರುಬ ಸಮಾಜದ ಜನ ಈಶ್ವರಪ್ಪನವರ ಮಾತಿಗೆ ಮರುಳಾಗಬಾರದು. ಬಿಜೆಪಿ ಆಂತರಿಕ ಕಲಹಕ್ಕೆ ರಾಯಣ್ಣ ಹೆಸರನ್ನು ಬಳಸಿಕೊಳ್ಳಬಾರದು. ಇದು ರಾಜಕೀಯ ಪಿತೂರಿ ಎಂದರು. 
 
ಅಕ್ಟೋಬರ್ 1ರಂದು ಹಾವೇರಿಯಲ್ಲಿ ನಡೆಸಲುದ್ದೇಶಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ವರ್ತೂರ್ ಪ್ರಕಾಶ್, ಸಮಾವೇಶಕ್ಕೆ ಬಹಿಷ್ಕಾರ ಹಾಕಲು ಕುರುಬ ಸಮಾಜದ ಮುಖಂಡರಲ್ಲಿ ಮನವಿ ಮಾಡಿಕೊಂಡರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರಕ್ಕೆ ಸಂತಸದ ಸುದ್ದಿ: ಜಾಗತಿಕ ಸ್ಪರ್ಧಾತ್ಮಕ ಶ್ರೇಯಾಂಕದಲ್ಲಿ 16 ಸ್ಥಾನ ಬಡ್ತಿ ಪಡೆದ ಭಾರತ