ಬೆಂಗಳೂರು : ಜೆ ಎಸ್ ಎಸ್ ಮಹಾವಿದ್ಯಾಪೀಠವು ತನ್ನ ಡಿಜಿಟಲ್ ಉಪಸ್ಥಿತಿಯನ್ನು ವೃದ್ಧಿಸಲು ಮತ್ತು ಸಮುದಾಯಗಳಿಗೆ ಹೆಚ್ಚು ತಲುಪುವ ಪ್ರಯತ್ನವಾಗಿ ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ - ಕೂ ಗೆ ಸೇರಿದೆ.
JSS ಮಹಾವಿದ್ಯಾಪೀಠವು 50,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಒದಗಿಸುವ ಸಾಮಾಜಿಕ-ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಯಾಗಿದೆ ಮತ್ತು ಕರ್ನಾಟಕದಾದ್ಯಂತ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯಗಳು, ಅನಾಥಾಶ್ರಮಗಳು, ವೃದ್ಧರ ಮನೆಗಳು, ವೃತ್ತಿಪರ ತರಬೇತಿ ಕೇಂದ್ರಗಳು ಇತ್ಯಾದಿಗಳನ್ನು ನಡೆಸುತ್ತಿದೆ.
@jssmahavidyapeetha ಹ್ಯಾಂಡಲ್ ಮೂಲಕ - ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸಲಿದೆ. JSS ಮಹಾವಿದ್ಯಾಪೀಠವು ರಾಜ್ಯದಾದ್ಯಂತ ತನ್ನ ಕೆಲಸಗಳ ಮೂಲಕ ಹೆಚ್ಚಿನ ಜನರನ್ನು ತಲುಪುಲಿದೆ.
“ಕಳೆದ ಹಲವಾರು ತಿಂಗಳುಗಳಲ್ಲಿ, ದೇಶದಾದ್ಯಂತದ ಪ್ರಖ್ಯಾತ ವ್ಯಕ್ತಿಗಳು ಮತ್ತು ಹೆಸರಾಂತ ಸಂಸ್ಥೆಗಳನ್ನು ವೇದಿಕೆಗೆ ಸ್ವಾಗತಿಸುವ ಅವಕಾಶ ನಮಗೆ ಸಿಕ್ಕಿದೆ. ಜೆ ಎಸ್ ಎಸ್ ಮಹಾವಿದ್ಯಾಪೀಠಕ್ಕೂ ನಾವು ಆತ್ಮೀಯ ಸ್ವಾಗತವನ್ನು ನೀಡುತ್ತೇವೆ ಮತ್ತು ಅವರ ಉಪಸ್ಥಿತಿಯಿಂದ ಅವರ ಮಾತೃಭಾಷೆಯಲ್ಲಿ ಜನರೊಂದಿಗೆ ಉತ್ತಮ ಸಂವಹನವನ್ನು ಸಾಧ್ಯವಾಗಲಿದೆ ಎಂದು ನಾವು ನಂಬುತ್ತೇವೆ, ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಅವರ ನಿಯಮಿತ ಅಪ್ ಡೇಟ್ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ' ಎಂದು ಕೂ ವಕ್ತಾರರು ತಿಳಿಸಿದ್ದಾರೆ.