Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ದೌಡಾಯಿಸಿ ಬಂದ ಜೆ.ಪಿ. ನಡ್ಡಾ: ರಾಜ್ಯ ಬಿಜೆಪಿ ನಾಯಕರ ಭಿನ್ನಮತಕ್ಕೆ ಸಿಗಲಿದೆಯೇ ಮುಲಾಮು

BJP National President JP Nadda

Sampriya

ಬೆಂಗಳೂರು , ಶುಕ್ರವಾರ, 3 ಜನವರಿ 2025 (15:06 IST)
Photo Courtesy X
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಚಟುವಟಿಕೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಗುರುವಾರ ಬೆಂಗಳೂರಿಗೆ ದೌಡಾಯಿಸಿದ್ದು, ಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಡ್ಡಾ ಅವರನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಯುವ ಮೋರ್ಚಾ ಅಧ್ಯಕ್ಷ ಧೀರಜ್ ಆತ್ಮೀಯವಾಗಿ ಬರಮಾಡಿಕೊಂಡರು.

ಬಳಿಕ ವಿಮಾನ ನಿಲ್ದಾಣದ ವಿಐಪಿ ಲಾಂಜ್​​ನಲ್ಲಿ ನಡ್ಡಾ ಅವರು, ರಾಜ್ಯ ಬಿಜೆಪಿ ನಾಯಕನ ಜೊತೆ ನಡ್ಡಾ ಮಾತುಕತೆ ನಡೆಸಿದರು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ ಎಂದು ವಿವರ ಕೇಳಿದರು.

ಇದೇ ವೇಳೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರಕ್ಕೆ ಯೋಜನೆಗಳನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ. ಇದಲ್ಲದೆ ಬಸ್ ದರ ಹೆಚ್ಚಳದ ಬಗ್ಗೆಯೂ ಮಾಹಿತಿ ನೀಡಿದರು.

ನಂತರ ನಡ್ಡಾ ಅವರು ವಿಮಾನ ನಿಲ್ದಾಣದಿಂದ ಕೆಕೆ ಗೆಸ್ಟ್ ಹೌಸ್​​ನತ್ತ ಪ್ರಯಾಣ ಬೆಳೆಸಿದರು. ಏರ್​ಪೋರ್ಟ್​ನಿಂದ ತೆರಳುವ ವೇಳೆ ವಿಜಯೇಂದ್ರ ಅವರನ್ನು ನಡ್ಡಾ ತಮ್ಮ ಜೊತೆ ಕಾರಿನಲ್ಲಿ ಕರೆದೊಯ್ದರು. ಇತರ ನಾಯಕರ ಬಳಿ ಶುಕ್ರವಾರ ಮಾತುಕತೆ ನಡೆಸುವುದಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ವಿವಿಧ ರಾಜ್ಯ ನಾಯಕರು ಪ್ರತ್ಯೇಕವಾಗಿ ನಡ್ಡಾ ಅವರನ್ನು ಭೇಟಿ ಮಾಡಿ, ರಾಜ್ಯ ಘಟಕದಲ್ಲಿನ ಗೊಂದಲಗಳನ್ನು ಬಗೆಹರಿಸುವಂತೆ ಮನವಿ ಮಾಡುವ ಸಾಧ್ಯತೆಗಳಿವೆ. ಇದೀಗ ನಡ್ಡಾ ಅವರು, ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಟ್ಟವಾದ ಮಂಜು, ಶೀತ ಅಲೆಗೆ ಕಂಗೆಟ್ಟ ರಾಷ್ಟ್ರ ರಾಜಧಾನಿ: ನೂರಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ