ಪತ್ರಕರ್ತ ಪ್ರಸಾದ್ ಹೆಗ್ಡೆ ನಿಧನ

Webdunia
ಭಾನುವಾರ, 19 ಮಾರ್ಚ್ 2023 (12:30 IST)
ಬೆಂಗಳೂರು : ಪತ್ರಕರ್ತ ಪ್ರಸಾದ್ ಹೆಗ್ಡೆ  (45) ಶನಿವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
 
ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಿರಸಿಯ ಸದ್ಗತಿ ನೆಮ್ಮದಿ ಕುಟೀರದಲ್ಲಿ ನೆರವೇರಲಿದೆ.

ಮೂಲತಃ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬೆಳಗುಂದ್ಲಿಯವರಾದ ಪ್ರಸಾದ್ ಹೆಗ್ಡೆ ಪ್ರಸ್ತುತ ರಾಜ್ ನ್ಯೂಸ್ ಔಟ್ ಪುಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ್ದ ಪ್ರಸಾದ್, ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. 

ಮೈಸೂರಿನ ಹಿರಿಯ ಕಲಾವಿದರು, ಸಾಹಿತಿಗಳ ಪ್ರಭಾವಕ್ಕೆ ಒಳಗಾಗಿದ್ದ ಪ್ರಸಾದ್ ಹೆಗ್ಡೆ, ರಂಗಭೂಮಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಇಚ್ಛೆ ಹೊಂದಿದ್ದರು. ಆದರೆ ಪದವಿ ಬಳಿಕ ಮಾಧ್ಯಮದೆಡೆಗೆ ವಾಲಿದರು. ಮೈಸೂರು ದಿಗಂತ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಪ್ರಸಾದ್, ಬಳಿಕ ಹಲೋ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯಲ್ಲಿ ಕೆಲ ಮಾಡಿದ್ದಾರೆ. ಹೆಗ್ಡೆ ನಿಧನಕ್ಕೆ ಗಣ್ಯರು, ಹಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments