ಶಿವಮೊಗ್ಗ: ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡಬೇಕು ಎಂದು ಅಣ್ಣಾವ್ರು ಹಾಡಿದ್ದಾರೆ. ಆದರೆ ಜೋಗ ಜಲಪಾತಕ್ಕೆ ಇನ್ನು ಕೆಲವು ದಿನಗಳಿಗೆ ಭೇಟಿ ಕೊಡುವುದು ವೇಸ್ಟ್ ಎನ್ನಬಹುದು. ಅದಕ್ಕೆ ಕಾರಣ ಇಲ್ಲಿದೆ.
ವಿಶ್ವ ವಿಖ್ಯಾತ ಜೋಗ ಜಲಪಾತ ಕರ್ನಾಟಕ ಆಕರ್ಷಣೀಯ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ, ಸಾಗರ ಕಡೆಗೆ ಹೋದರೆ ಜೋಗ ಜಲಪಾತಕ್ಕೆ ಭೇಟಿ ಕೊಟ್ಟೇ ಕೊಡುತ್ತಾರೆ. ನಿತ್ಯವೂ ಇಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.
ಆದರೆ ಇದೀಗ ಜೋಗ ಜಲಪಾತಕ್ಕೆ ಹೋಗುವುದೇ ಟೈಂ, ದುಡ್ಡು ಎಲ್ಲವೂ ವೇಸ್ಟ್ ಎನ್ನುತ್ತಿದ್ದಾರೆ ಸಾರ್ವಜನಿಕರು. ಇದಕ್ಕೆ ಕಾರಣವೂ ಇದೆ. ಸದ್ಯಕ್ಕೆ ಜೋಗ ಜಲಪಾತವನ್ನು ಹತ್ತಿರದಿಂದ ವೀಕ್ಷಣೆ ಮಾಡಲು ಅವಕಾಶವಿಲ್ಲ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ದೂರ ರಸ್ತೆಯಿಂದಲೇ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ.
ಮೊದಲೇ ಜಲಪಾತದಲ್ಲಿ ನೀರಿಲ್ಲ. ಅದರ ಮೇಲೆ ಮೈಲಿ ದೂರದಿಂದ ಜಲಪಾತ ವೀಕ್ಷಿಸಿದರೆ ಅದರ ಖುಷಿಯೇ ಸಿಗದು. ಇನ್ನು, ನಿಮಗೆ ತೀರಾ ಹತ್ತಿರದಿಂದ ನೋಡಬೇಕು ಎಂದರೆ ಅಲ್ಲಿಯೇ ಇರುವ ಖಾಸಗಿ ಗೈಡ್ ಗಳು ಆಟೋ ಮೂಲಕ ಮುಂಗಾರು ಮಳೆ ಪಾಯಿಂಟ್ ತನಕ ಕರೆದುಕೊಂಡು ಹೋಗುತ್ತಾರೆ. ಆದರೆ ಈ ರೀತಿ ಕರೆದೊಯ್ಯಲು ತಲಾ ಒಬ್ಬರಿ 150 ರೂ.ವರೆಗೆ ಚಾರ್ಜ್ ಮಾಡಲಾಗುತ್ತದೆ. ಅಷ್ಟೊಂದು ದುಡ್ಡು ಕೊಟ್ಟು ಹೋದರೂ ನೋಡುವಷ್ಟು ನೀರಿಲ್ಲ. ಹೀಗಾಗಿ ಟೈಂ, ದುಡ್ಡು ಎರಡೂ ವೇಸ್ಟ್ ಎನ್ನುತ್ತಿದ್ದಾರೆ ಜನ.