Publish Date: Tue, 23 Dec 2025 (19:37 IST)
Updated Date: Tue, 23 Dec 2025 (19:42 IST)
ಬೆಂಗಳೂರು: ಖ್ಯಾತ ಹಿಂದಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನೋದ್ ಕುಮಾರ್ ಶುಕ್ಲಾ(88) ಇಂದು ರಾಯ್‌ಪುರದಲ್ಲಿ ಮಂಗಳವಾರ ನಿಧನರಾದರು.
ಹೆಸರಾಂತ ಹಿಂದಿ ಬರಹಗಾರ, ಕವಿ ಮತ್ತು ಕಾದಂಬರಿಕಾರ ಶುಕ್ಲಾ ಅವರು ಛತ್ತೀಸ್‌ಗಢದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.
ಶುಕ್ಲಾ ಅವರು ಸಂಜೆ 4:58 ಕ್ಕೆ ನಿಧನರಾದರೆಂದು ಏಮ್ಸ್ ರಾಯ್‌ಪುರದ ಪಿಆರ್‌ಒ ಲಕ್ಷ್ಮೀಕಾಂತ್ ಚೌಧರಿ ಅವರು ದೃಢಪಡಿಸಿದರು.
ಸಾವಿಗೆ ಬಹು ಅಂಗಗಳ ಸೋಂಕು ಮತ್ತು ಅಂಗ ವೈಫಲ್ಯ ಕಾರಣ ಎಂದು ಹೇಳಿದರು. ಡಿಸೆಂಬರ್ 2 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಈ ವರ್ಷದ ಆರಂಭದಲ್ಲಿ, ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಶುಕ್ಲಾ ಅವರಿಗೆ 59 ನೇ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯು ವಿವಿಧ ಭಾರತೀಯ ಭಾಷೆಗಳಲ್ಲಿ ಸಾಹಿತ್ಯದಲ್ಲಿ ಸಾಧನೆ ಮಾಡಿದ ಲೇಖಕರಿಗೆ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ.
ಹೆಸರಾಂತ ಹಿಂದಿ ಬರಹಗಾರ, ಕವಿ ಮತ್ತು ಕಾದಂಬರಿಕಾರ ಶುಕ್ಲಾ ಅವರು ಛತ್ತೀಸ್‌ಗಢದಿಂದ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.