ಬುರ್ಖಾ ತೆಗೆದು ಬ್ಲ್ಯಾಕ್ ಮ್ಯಾಜಿಕ್ ;ಚಿನ್ನದ ಅಂಗಡಿ ಮಾಲಿಕರಿಗೆ ಮೋಸ

Webdunia
ಗುರುವಾರ, 15 ಸೆಪ್ಟಂಬರ್ 2022 (17:25 IST)
ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು ಜ್ಯೂವೆಲರಿ ಶಾಪ್ ಮಾಲೀಕರೊಬ್ಬರ ಮೇಲೆ‌ ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡಿ 85 ಸಾವಿರ ರೂಪಾಯಿ ಹಣ ದೋಚಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಯಲಹಂಕದ ಅಟ್ಟೂರು ಲೇಔಟ್ ಜ್ಯುವೆಲರಿ ಶಾಪ್​ನಲ್ಲಿ ಈ ಘಟನೆ ನಡೆದಿದೆ.
 
ನಕಲಿ ಬಂಗಾರದ‌ ಆಭರಣ ತಂದು ಕೈಚಳಕ ತೋರಿದ್ದಾಳೆ. ಈಕೆ ಬುರ್ಖಾ ತೆಗೆದು ಮುಖ‌ ತೋರಿಸುತ್ತಿದ್ದಂತೆಯೇ ಅಂಗಡಿ ಮಾಲೀಕ ಪ್ರಜ್ಞೆ ತಪ್ಪಿದ್ದಾರೆ. ನಂತರ ಆಕೆ ಹೇಳಿದಂತೆ ಸಾವಿರಾರು ರೂಪಾಯಿ ಹಣ ಕೊಟ್ಟಿದ್ದಾರೆ!
 
ಮಹಿಳೆ ಬ್ಲ್ಯಾಕ್ ಮ್ಯಾಜಿಕ್​ನ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಅಂಗಡಿಯಿಂದ‌ ಹೊರ‌ ಹೋಗ್ತಿದ್ದಂತೆ ಎಚ್ಚರಗೊಂಡ ಅಂಗಡಿ ಮಾಲೀಕನಿಗೆ ಆಗಲೇ ತಾವು ಮೋಸ ಹೋಗಿರುವುದು ತಿಳಿದಿದೆ.
 
ಇದೇ ರೀತಿ‌ ಯಲಹಂಕ ಆರ್.ಟಿ ನಗರ ಸೇರಿದಂತೆ ಹಲವೆಡೆ ಮಹಿಳೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಮುಖ‌ ತೋರಿಸಿ ಕೈ ಮುಟ್ಟುತ್ತಿದ್ದಂತೆಯೇ ಅಂಗಡಿಯವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ನಂತರ ಆಕೆ ಹೇಳಿದಂತೆ ಹಣ, ಒಡವೆ ಕೊಡುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಚಿನ್ನದಂಗಡಿಯ ಮಾಲೀಕರಿಗೆ ಆತಂಕ ಎದುರಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Today Weather: ರಾಜ್ಯದ ಈ ಭಾಗದಲ್ಲಿ ಇಂದು ಮಳೆಯಾಗಲಿದೆ

ಆಹಾರ ಅರಸಿ ಬಂದು ನೀರಿದ್ದ ಬಾವಿಗೆ ಬಿದ್ದ ನಾಲ್ಕು ಆನೆಗಳು, ತನ್ನ ಮಗು ರಕ್ಷಣೆಗೆ ತಾಯಿ ಆನೆ ಪರದಾಟ

ನಿಜಜೀವನದಲ್ಲೂ ನಾಯಕನಂತೆ ಬದುಕಬೇಕು, ಪರೋಕ್ಷವಾಗಿ ದರ್ಶನ್‌ಗೆ ಬುದ್ದಿಮಾತು ಹೇಳಿದ್ರಾ ಸಿಎಂ

ಬಿಹಾರದಲ್ಲಾಡಿದ ಮಾತು ತಮಿಳುನಾಡಿನಲ್ಲಿ ಹೇಳಲು ಮೋದಿಗೆ ಧೈರ್ಯವಿದೆಯೇ: ಸ್ಟಾಲಿನ್ ಸವಾಲು

ದೆಹಲಿ ಝೂನಲ್ಲಿದ್ದ ಆಫ್ರಿಕನ್ ಆನೆ ವೈರಲ್ ಸೋಂಕಿನಿಂದ ಸಾವು, ಹೆಚ್ಚಿದ ಆತಂಕ

ಮುಂದಿನ ಸುದ್ದಿ
Show comments