Select Your Language

Notifications

webdunia
webdunia
webdunia
webdunia

ಶಾಸಕ ಸ್ಥಾನದಿಂದ ಅಂಬರೀಷ್ ವಜಾಕ್ಕೆ ಮನವಿ

ಶಾಸಕ ಸ್ಥಾನದಿಂದ ಅಂಬರೀಷ್ ವಜಾಕ್ಕೆ ಮನವಿ
ವಿಧಾನಸೌಧ , ಶುಕ್ರವಾರ, 28 ಏಪ್ರಿಲ್ 2017 (17:39 IST)
ಶಾಸಕ ಸ್ಥಾನದಿಂದ ಅಂಬರೀಷ್ ಅವರನ್ನ ವಜಾಗೊಳಿಸಬೇಕೆಂದು ಕೋರಿ ಮಂಡ್ಯದ ಜಿಲ್ಲಾ ಜೆಡಿಯು ಅಧ್ಯಕ್ಷ ಬಿ.ಎಸ್. ಗೌಡ ಎಂಬುವವರು ಸ್ಪೀಕರ್ ಕೆ.ಬಿ. ಕೋಳಿವಾಡಗೆ ಮನವಿ ಸಲ್ಲಿಸಿದ್ದಾರೆ.

ಕಳೆದೊಂದು ವರ್ಷದಿಂದ ಅಂಬರೀಷ್ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಕ್ಷೇತ್ರದಲ್ಲಿ ನಡೆಯಬೇಕಾದ ಅಭಿವೃದ್ಧಿ ಕೆಲಸಗಳಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿರುವ ಅವರನ್ನ ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದು, ಪೂರಕ ಕಾರಣಗಳನ್ನೂ ಸ್ಪೀಕರ್ ಮುಂದಿಟ್ಟಿದ್ದಾರೆ.

ಸಚಿವ ಸ್ಥಾನದಿಂದ ತೆಗೆದು ಹಾಕಿದ ಬಳಿಕ ಅಂಬರೀಷ್ ಕಾಂಗ್ರೆಸ್`ನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣಾ ಪ್ರಚಾರ ಕಣದಿಂದಲೂ ಅಂಬರೀಷ್ ದೂರವೇ ಉಳಿದಿದ್ದರು. ಕಾವೇರಿ ಹೋರಾಟದಲ್ಲಿ ಮಂಡ್ಯ ರೈತರ ಪರ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್ನೆಟ್ ರಿಪೇರಿಗೆ ಬಂದ ಟೆಕ್ನಿಶಿಯನ್ ಮಹಿಳೆ ಮಹಿಳೆ ಎರಗಿದ್ದ