Select Your Language

Notifications

webdunia
webdunia
webdunia
webdunia

ಜೆಡಿಎಸ್ ರೆಬೆಲ್ ಶಾಸಕರ ಅಮಾನತು: ಕುಮಾರಸ್ವಾಮಿಗೆ ಸಭಾಪತಿ ನೋಟಿಸ್ ಜಾರಿ

ಜೆಡಿಎಸ್ ರೆಬೆಲ್ ಶಾಸಕರ ಅಮಾನತು: ಕುಮಾರಸ್ವಾಮಿಗೆ ಸಭಾಪತಿ ನೋಟಿಸ್ ಜಾರಿ
ಬೆಂಗಳೂರು , ಶನಿವಾರ, 27 ಆಗಸ್ಟ್ 2016 (15:37 IST)
ಜೆಡಿಎಸ್ ಪಕ್ಷದ ಎಂಟು ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವಿಧಾನಸಭೆ ಕಾರ್ಯದರ್ಶಿ ಎನ್.ಮೂರ್ತಿ ನೋಟಿಸ್ ಜಾರಿ ಮಾಡಿದ್ದಾರೆ.
 
ಜಮೀರ್ ಅಹ್ಮದ್, ಇಕ್ಬಾಲ್ ಅನ್ಸಾರಿ, ಬಂಡಿಸಿದ್ದೇಗೌಡ, ಗೋಪಾಲಯ್ಯ ಚೆಲುವರಾಯ ಸ್ವಾಮಿ, ಅಖಂಡ ಶ್ರೀನಿವಾಸ್ ಮೂರ್ತಿ,ಭೀಮಾನಾಯ್ಕ ಹಾಗೂ ಎಚ್.ಸಿ ಬಾಲಕೃಷ್ಣ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುಂತೆ ಜೆಡಿಎಸ್ ನಾಯಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ.
 
ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪಕ್ಷದ ಎಂಟು ರೆಬಲ್ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ಕಾವೇರಿ ನೀರು: ಸರಕಾರದಿಂದ ಶೀಘ್ರದಲ್ಲಿ ಅಂತಿಮ ತೀರ್ಮಾನ