JDS ಶಾಸಕರಿಂದ ಧರ್ಮಸ್ಥಳ ಪ್ರವಾಸ ಭಾಗ್ಯ..!

Webdunia
ಮಂಗಳವಾರ, 4 ಏಪ್ರಿಲ್ 2023 (14:42 IST)
ಮಧುಗಿರಿ ವಿಧಾನಸಭಾ ಕ್ಷೇತ್ರ ರಂಗೇರುತ್ತಿದೆ. ಮತದಾರರನ್ನ ಸೆಳೆಯಲು JDS ಶಾಸಕರು ಮುಖಂಡರು ಹಾಗೂ ಮತದಾರರಿಗೆ ಧರ್ಮಸ್ಥಳ ಪ್ರವಾಸ ಭಾಗ್ಯ ಕರುಣಿಸಿದ್ದಾರೆ. ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಶಾಸಕರು ಹೇಳಿದ್ದಾರೆ. ಪ್ರವಾಸಕ್ಕೆ ಹೊರಟಿರುವುದು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಾವೇ ವೈಯಕ್ತಿಕವಾಗಿ ಪ್ರವಾಸಕ್ಕೆ ಹೋಗಿ ಬರುತ್ತಿದ್ದೇವೆ ಎಂದು ಹೇಳಿ. ಕಾಫಿ, ತಿಂಡಿ ಖರ್ಚಿಗೆ ಶಾಸಕರು 20 ಸಾವಿರ ನೀಡಿದ್ದಾರೆ. ಹುಷಾರಾಗಿ ಹೋಗಿ ಬನ್ನಿ.ಹೊರನಾಡು, ಧರ್ಮಸ್ಥಳ, ಕುಕ್ಕೆ, ಸೌಥಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ವಾಪಸ್​ ಬನ್ನಿ ಎಂಬ ವಿಡಿಯೋ ವೈರಲ್​ ಆಗಿದೆ. ಕಸಬಾ ವ್ಯಾಪ್ತಿಯ JDS ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪ್ರವಾಸ ಹೊರಟಿರುವ ತಂಡದ ಬಸ್​​ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ದೊಡ್ಡೇರಿ ಹೋಬಳಿಯ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ ಬಳಿಕ ಚುನಾವಣಾಧಿಕಾರಿಗಳು ಹಾಲಿ ಶಾಸಕ M.V ವೀರಭದ್ರಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಣಾಮ್ ಸಾಬ್ ಪ್ರೊಟೆಸ್ಟ್ ಮಾಡ್ತಿದ್ದೀನಿ.. ಬರ್ತ್ ಡೇ ದಿನ ಬಿವೈ ವಿಜಯೇಂದ್ರಗೆ ಅಮಿತ್ ಶಾ ಕಾಲ್ video

ಮೈಸೂರಿಗೆ ಫ್ಲೈ ಓವರ್ ಬೇಡವೇ ಬೇಡ: ಸಿಎಂಗೆ ಪತ್ರ ಬರೆದ ಸಂಸದ ಯದುವೀರ್ ಒಡೆಯರ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿಯೋ ಫೋನ್ ನಲ್ಲಿ ಬಳಸಿದ್ರೆ ಅದಾನಿಗೆ ದುಡ್ಡು: ರಾಹುಲ್ ಗಾಂಧಿ ಹೇಳಿಕೆ ಭಾರೀ ಟ್ರೋಲ್ video

ಮುಂದಿನ ಸುದ್ದಿ
Show comments