ಕುದೂರು ಠಾಣೆಯಲ್ಲಿ ಮಾಗಡಿ ಶಾಸಕರ ದರ್ಪಕ್ಕೆ ಸಂಬಂಧಿಸಿದಂತೆ ಶಾಸಕರ ಸ್ಥಾನ ತಾತ್ಕಾಲಿಕವಾಗಿರುವಂತದ್ದು, ಹೀಗಾಗಿ ಶಾಸಕರಾದವರು ಸ್ವಲ್ಪ ತಗ್ಗಿ ಬಗ್ಗಿ ನಡೆಯುವುದು ಸೂಕ್ತ ಎಂದು ಶಾಸಕ ಎಚ್.ಸಿ.ಬಾಲಕೃಷ್ಣಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರೊಂದಿಗೆ ಹೋಗಿ ಬೆದರಿಕೆ ಹಾಕಿದರೆ ಬೆಂಬಲ ಸಿಗುತ್ತೆ ಎಂದು ಹಲವು ಶಾಸಕರ ಭಾವನೆ. ಎಚ್.ಸಿ.ಬಾಲಕೃಷ್ಣ 4 ಬಾರಿ ಶಾಸಕರಾದವರು. ಅವರಿಗೆ ಅನುಭವದ ಕೊರತೆ ಇಲ್ಲ. ಈ ಹಿಂದೆಯೂ ಎಚ್.ಸಿ.ಬಾಲಕೃಷ್ಣ ಇದೇ ರೀತಿ ವರ್ತಿಸಿದ್ದಾರೆ ಎಂದು ದೂರಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾನು ಹಾಗೂ ಎಚ್.ಡಿ.ರೇವಣ್ಣ ಮಾತ್ರ ಕಣಕ್ಕಿಳಿಯುತ್ತೇವೆ. ಇದರಲ್ಲಿ ಬೇರೆ ಮಾತಿಲ್ಲ. ಪದೇ ಪದೇ ಇದನ್ನೇ ಹೇಳುತ್ತಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತೆ ಎಂದರು.
2018 ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ. ಈ ಕುರಿತು ಇನ್ನಷ್ಟೇ ಚರ್ಚಿಸಬೇಕಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ