Select Your Language

Notifications

webdunia
webdunia
webdunia
webdunia

ಬಂಡಾಯ ಶಾಸಕರಿಗೆ ಜೆಡಿಎಸ್‌ ಬಾಗಿಲು ತೆರೆಯಲ್ಲ: ಎಚ್.ಡಿ.ದೇವೇಗೌಡರು

ಬಂಡಾಯ ಶಾಸಕ
ಹಾಸನ , ಶುಕ್ರವಾರ, 24 ಜೂನ್ 2016 (11:37 IST)
ಹಾಸನ: ಪಕ್ಷ ತೊರೆದಿರುವ 8 ಬಂಡಾಯ ಶಾಸಕರಿಗೆ ಜೆಡಿಎಸ್ ಬಾಗಿಲು ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ವಷ್ಟಪಡಿಸಿದ್ದಾರೆ.
 
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಜೆಡಿಎಸ್ ಬಂಡಾಯ ಶಾಸಕರಿಗೆ ಪಕ್ಷ ಬಾಗಿಲು ತೆರೆಯುವ ಪ್ರಶ್ನೆಯೇ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡಿದ ಸಮಯದಲ್ಲೂ 40 ಶಾಸಕರನ್ನು ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು.
 
ಪಕ್ಷದ ವಿಪ್ ಉಲ್ಲಂಘಿಸಿದ 8 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಈಗಾಗಲೇ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಮಾಜಿ ಸಚಿವ ಅಂಬರೀಶ್ ಜೆಡಿಎಸ್ ಪಕ್ಷದಿಂದಲ್ಲೇ ರಾಜಕೀಯಕ್ಕೆ ಬಂದವರು. ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಮೇಲಿನ ಪ್ರೀತಿಯಿಂದ ಅವರಿಗೆ ಕರೆ ಮಾಡಿ ದುಡುಕಿನ ನಿರ್ಧಾರ ಬೇಡವೆಂದು ಸಲಹೆ ನೀಡಿದ್ದೇನೆ ಹೊರತು ಯಾವುದೇ ತರಹದ ಪ್ರಚೋದನೆ ನೀಡಿಲ್ಲವೆಂದು ಸ್ವಷ್ಟಪಡಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕನೆಯ ಮದುವೆಗೆ ತಯಾರಿ: ಗ್ರಹಚಾರ ಬಿಡಿಸಿದ ಪ್ರಿಯತಮೆ