Publish Date: Sun, 28 Feb 2021 (11:59 IST)
Updated Date: Sun, 28 Feb 2021 (12:01 IST)
ಮೈಸೂರು : ಮೈಸೂರು ಪಾಲಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮೈತ್ರಿ ಗೊಂದಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಕೊನೆ ಕ್ಷಣದಲ್ಲಿ ಮೈತ್ರಿಯಾಗಲು ಜಿ.ಟಿ.ದೇವೇಗೌಡ, ಸಂದೇಶ ನಾಗರಾಜ್ ಕಾರಣ. ಅವರು ಎಲೆಕ್ಷನ್ ಗೆ ಬಂದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯ ಜೊತೆ ಡಿಕೆಶಿ ಚರ್ಚೆ ಮಾಡಿದ್ದರು. ಈ ವೇಳೆ ಮೈತ್ರಿ ಮಾಡಿಕೊಳ್ಳಲು ಮನವಿ ಮಾಡಿದ್ದರು. ಜಿಟಿಡಿ, ಸಂದೇಶ್ ನಾಗರಾಜ್ ಬರಲ್ಲ ಎಂದು ತಿಳಿಯಿತು. ಅವರು ಚುನಾವಣೆಗೆ ಬರಲ್ಲವೆಂದು ತಿಳಿದಾಗ ಒಪ್ಪಿಗೆ ನೀಡಲಾಯಿತು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಒಪ್ಪಿದ್ದೆವು. ಮೈಸೂರು ಜಿಲ್ಲೆಯಿಂದಲೇ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ. ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ ಎಂದು ಅವರು ತಿಳಿಸಿದ್ದಾರೆ.