Publish Date: Wed, 12 Jul 2023 (17:20 IST)
Updated Date: Wed, 12 Jul 2023 (15:22 IST)
ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಜೆಸಿಬಿ ಘರ್ಜಿಸಿದೆ.ನಗರದ ಆಸ್ಟೀನ್ ಟೌನ್ ನಲ್ಲಿ ಅನಧಿಕೃತ ಶೆಡ್ ಗಳ ತೆರವು ಮಾಡಲಾಗಿದೆ. ಬಿಡಿಎ ಅಲರ್ಟ್ ಮಾಡಿದ್ದ ಜಾಗದಲ್ಲಿ ಅನಧಿಕೃತವಾಗಿ ಮಳೆಗೆಗಳು ತಲೆ ಎತ್ತಿದ್ದು,ಅನಧಿಕೃತ ಮಳಿಗೆಗಳಲ್ಲಿ ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.ದೊಮ್ಮಲೂರು ಉಪವಿಭಾಗದ ಎಇಇ ಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯ ಮಾಡಲಾಗಿದೆ.20 ಕ್ಕೂ ಹೆಚ್ಚು ಅನಧಿಕೃತ ಶೆಡ್ ಗಳ ತೆರವು ಮಾಡಲಾಗಿದೆ.ಕೆಬಿಆರ್ ರಸ್ತೆಯಲ್ಲಿದ್ದ ತಳ್ಳೋ ಗಾಡಿಗಳ ತೆರವು ಮಾಡಿದ್ದು,ಮಳಿಗೆಗಳನ್ನ ಖಾಲಿ ಮಾಡಿಸಿ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ಮಾಡಿಸಿದ್ದಾರೆ.