Publish Date: Wed, 28 Jun 2017 (16:44 IST)
Updated Date: Wed, 28 Jun 2017 (16:46 IST)
ಜಂತಕಲ್ ಮೈನಿಂಗ್ ಕಂಪೆನಿಗೆ ಪರ್ಮಿಟ್ ಆರೋಪ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಹೈಕೋರ್ಟ್ ರಿಲೀಫ್ ನೀಡಿ ಆದೇಶ ಹೊರಡಿಸಿದೆ.
ಜುಲೈ ಕೊನೆಯ ವಾರದವರೆಗೂ ಕುಮಾರಸ್ವಾಮಿಯವರನ್ನು ಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ಜುಲೈ ಕೊನೆಯ ವಾರಕ್ಕೆ ನಿಗದಿಪಡಿಸಿದೆ.
ಈ ಹಿಂದೆ ಇದೇ ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರಿಗೆ ಜಾಮೀನು ನೀಡಲಾಗಿದೆ. ವಿಶೇಷ ತನಿಖಾ ತಂಡ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಜಂತಕಲ್ ಮೈನಿಂಗ್ ಪರ್ಮಿಟ್ ಕೇಸ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ 150 ಕೋಟಿ ರೂಪಾಯಿ ಕಪ್ಪ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.