Publish Date: Fri, 11 Nov 2016 (13:05 IST)
Updated Date: Fri, 11 Nov 2016 (13:07 IST)
ಟಿಪ್ಪು ಜಯಂತಿ ದಿನಾಚರಣೆಯಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ಅರೆನಗ್ನ ಚಿತ್ರಗಳ ವೀಕ್ಷಣೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ನೀವು ವರದಿ ಕೇಳಿದ್ದೀರಿ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ನೀವು ಸಿಎಂ ಆಗಿ ವರದಿ ಕೇಳುವ ಅಗತ್ಯವಿಲ್ಲ ಅವರನ್ನು ಕೂಡಲೇ ವಜಾ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಗುಡುಗಿದ್ದಾರೆ.
ಸಂಪುಟದಿಂದ ಸಚಿವ ತನ್ವೀರ್ ಸೇಠ್ ಅವರನ್ನು ವಜಾ ಮಾಡದಿದ್ದರೆ ನಿಮಗೆ ತಾಕತ್ತಿಲ್ಲ ಎಂದಂತಾಗುತ್ತದೆ. ಈಗ ನಾವು ನಿದ್ದೆ ಮಾಡಿದರೆ, ಮುಂಬರುವ ಚುನಾವಣೆಯಲ್ಲೂ ನಿದ್ದೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮತ್ತು ರಾಜ್ಯದ ಜನತೆಯ ಗೌರವವನ್ನು ಕಾಪಾಡಲು ಇಂದು ಸಂಜೆಯೊಳಗೆ ತನ್ವೀರ್ ಸೇಠ್ ಅವರನ್ನು ವಜಾ ಮಾಡಿ. ಇಲ್ಲಾಂದ್ರೆ ಸಚಿವನನ್ನು ವಜಾಗೊಳಿಸಲು ಮುಖ್ಯಮಂತ್ರಿಗಳಿಗೆ ಸೂಚನೆ ನೀಡುವಂತೆ ಹೈಕಮಾಂಡ್‌ಗೆ ಕೋರುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮನ್ನು ಆಯ್ಕೆ ಮಾಡಿರುವ ಮೈಸೂರು ಜನತೆಗೆ ಅಪಮಾನ ಮಾಡಬೇಡಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ