Webdunia - Bharat's app for daily news and videos

Install App

ಪುನೀತ್ ಹುಟುಹಬ್ಬ ಜೇಮ್ಸ್ ಹಬ್ಬ

Webdunia
ಶುಕ್ರವಾರ, 18 ಫೆಬ್ರವರಿ 2022 (15:13 IST)
ನಟ ಪವರ್​​ಸ್ಟಾರ್​ ಪುನೀತ್ ರಾಜಕುಮಾರ್ ಅನುಪಸ್ಥಿತಿಯಲ್ಲಿ ನಡೆಯಲಿರುವ ಮೊದಲ ಜನ್ಮದಿನ. ಅಂದೇ ಅವರ ಅಭಿನಯದ 'ಜೇಮ್ಸ್​' ಸಿನಿಮಾ ಬಿಡುಗಡೆ ಆಗಲಿದೆ. ಅಪ್ಪು ಇಲ್ಲ ಎಂಬ ನೋವಿನ ನಡುವೆಯೇ ಜನ್ಮದಿನ ಹಾಗೂ ಸಿನಿಮಾ ಬಿಡುಗಡೆ ನಡೆಯಲಿದೆ
ಮಾರ್ಚ್​ 17ರಂದು ಬೆಂಗಳೂರಿನ ವೀರೇಶ್​ ಚಿತ್ರಮಂದಿರದಲ್ಲಿ ಜೇಮ್ಸ್ ಉತ್ಸವ ನಡೆಯಲಿದೆ. ಡಾ.ರಾಜ್​ ಕುಟುಂಬದ ಅಭಿಮಾನಿಗಳಿಂದ ಈ ಜೇಮ್ಸ್​ ಉತ್ಸವ ನಡೆಯಲಿದ್ದು, ಅಂದು ವಿಶೇಷ ಅನಿಸುವಂಥ ಹಲವಾರು ಸಂಗತಿಗಳು ನಡೆಯಲಿವೆ. ಮಾ. 17ರಂದು ಅಪ್ಪು ಅಭಿನಯದ ಮೊದಲ ಚಿತ್ರದಿಂದ ಹಿಡಿದು ಜೇಮ್ಸ್ ವರೆಗಿನ ಎಲ್ಲ 31 ಚಿತ್ರಗಳ ಕಟೌಟ್​​ಗಳು ಅಲ್ಲಿರಲಿವೆ. ಮಾತ್ರವಲ್ಲ ಎಲ್ಲ ಕಟೌಟ್​ಗಳಿಗೂ ಭಾರಿ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ಜೇಮ್ಸ್​ ಚಿತ್ರದ ಕಲಾವಿದರು, ಖ್ಯಾತ ನಟ-ನಟಿಯರು ಸೇರಿ ಚಿತ್ರರಂಗದ ಹಲವು ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
 
ಅಲ್ಲದೆ ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಅವರ ಬೃಹತ್ ಕಟೌಟ್​ಗಳೂ ಇರಲಿವೆ. ವಿಶೇಷವೆಂದರೆ ಪುನೀತ್ ಭಾವಚಿತ್ರಕ್ಕೆ ಹೆಲಿಕಾಪ್ಟರ್ ಮೂಲಕ ಸತತವಾಗಿ 1 ಗಂಟೆ ಹೂಮಳೆಗರೆಯಲಾಗುತ್ತದೆ. ಇನ್ನು ಅದೇ ಹೆಲಿಕಾಪ್ಟರ್​ ಮೇಲಿನಿಂದ ಪುನೀತ್ ರಾಜಕುಮಾರ್ ಅವರ 40 ಅಡಿ ಉದ್ದದ ಫೋಟೋ ಬಿಡಲಾಗುವುದು. ಜೊತೆಗೆ ಮಕ್ಕಳಿಗೆ ವಯೋವೃದ್ಧರಿಗೆ ಬಟ್ಟೆ ವಿತರಣೆ, ಸಿಹಿ ಹಂಚಿಕೆ, ಗಿಡ ವಿತರಣೆ ಕೂಡ ನಡೆಯಲಿದೆ.
ವಿವಿಧ ಸಾಂಸ್ಕೃತಿಕ ತಂಡಗಳಿಂದ ಡೊಳ್ಳುಕುಣಿತ, ಪೂಜಾಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ಕಲಾವಿದರಿಂದ ವಾದ್ಯಗೋಷ್ಠಿ, ಬೆಂಗಳೂರು ತಮಟೆ ಕಲೆಗಳ ಪ್ರದರ್ಶನವೂ ಇರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ವಿರಾಮದ ಬಳಿಕ ಇಂದು ಹೇಗಿರಲಿದೆ ಆಪರೇಷನ್ ಅಸ್ಥಿಪಂಜರ

ಶ್ರೀಮಂತನಾಗಿದ್ದರೂ ಜೈಲಲ್ಲಿ ಹೇಗಿದ್ದಾರೆ ಪ್ರಜ್ವಲ್ ರೇವಣ್ಣ

Karnataka Weather: ಈ ವಾರ ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments