Select Your Language

Notifications

webdunia
webdunia
webdunia
webdunia

‘ಚುನಾವಣೆಗೆ ನಿಂತು ಗಂಡಸ್ಸುತನ ತೋರು’ ಪ್ರಕಾಶ್ ರೈಗೆ ಜಗ್ಗೇಶ್ ಸವಾಲು!

‘ಚುನಾವಣೆಗೆ ನಿಂತು ಗಂಡಸ್ಸುತನ ತೋರು’ ಪ್ರಕಾಶ್ ರೈಗೆ ಜಗ್ಗೇಶ್ ಸವಾಲು!
ಬೆಂಗಳೂರು , ಶನಿವಾರ, 17 ಫೆಬ್ರವರಿ 2018 (10:01 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಕಿಡಿ ಕಾರುವ ಬಹುಭಾಷಾ ತಾರೆ ಪ್ರಕಾಶ್ ರೈಗೆ ನವರಸನಾಯಕ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
 

ಮೋದಿಗೆ ದೇಶ ಆಳುವ ಹಕ್ಕಿಲ್ಲ ಎಂಬ ಪ್ರಕಾಶ್ ರೈ ಹೇಳಿಕೆ ಉಲ್ಲೇಖಿಸಿ ಜಗ್ಗೇಶ್ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ. ಗಂಡಸ್ತನ ಇದ್ದರೆ ಚುನಾವಣೆಗೆ ಸ್ಪರ್ಧಿಸಿ ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.

‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮಾತಾಡುವ ಹಕ್ಕಿದೆ. ಆದರೆ ಪ್ರಚಾರಕ್ಕೆ, ಕೈ ನಾಯಕರ ಶಹಬಾಶ್ ಗಿರಿಗೆ ಬೇಕಿತ್ತಾ ಈ ತಳಮಟ್ಟದ ನಡೆ? ಮೋದಿ ತೆಗಳಿ ಯಾರೋ ಏನೋ ಆದರು ಅಂತ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ಪ್ರಶಸ್ತಿ ಸ್ವೀಕರಿಸುತ್ತೀರಿ? ನಿಲ್ಲಿ ಚುನಾವಣೆಗೆ! ತಟ್ಟಿತೊಡೆ ಅದು ಗಂಡಸ್ಸುತನ! ಯಾಕೆ ಚುನಾವಣೆ ಹೊಸ್ತಿಲಲ್ಲಿ ಈ ಡ್ರಾಮಾ ಕಂಪನಿ?’ ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ.

‘ನಿಮಗೆ ಏನು ಅರ್ಹತೆ ಇದೆ? ರಾಜಕೀಯ ಅನುಭವ ಇಲ್ಲಾ? ಕಾನೂನು ವಿದ್ಯಾರ್ಥಿಯೇ? ಅಲ್ಲ!ಗ್ರಾಮ, ಜಿಲ್ಲೆ, ತಾಲೂಕ್, ವಿಧಾನಸಭೆ, ಸಂಘಟನೆ, ಸ್ಪರ್ಧೆ? ಪರಿಚಯ?  ಅದೃಷ್ಟ ಇತ್ತು, ಪ್ರತಿಭೆ ಇತ್ತು ಬಿಡುವಿಲ್ಲದ ನಟನಾದೆ. ತಮಿಳು ನಟನಾಗಿ ಕನ್ನಡಕ್ಕೆ ಸೊಲ್ಲಡಗಿತ್ತು! ಈಗ ಯಾಕೆ ಈ ಪೌರುಷ? ಪ್ರಚಾರ ತಾನೆ? ವ್ಯರ್ಥ ಬದುಕು!’ ಎಂದು ಮತ್ತೊಂದು ಟ್ವೀಟ್ ನಲ್ಲಿ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲದೆ ಇನ್ನೊಂದು ಟ್ವೀಟ್ ನಲ್ಲಿ ನಮ್ಮ ನಿಮ್ಮ ಪ್ರಯಾಣ ರಾಜಕಿಶೋರ್ ಜತೆ ಮೈಸೂರು ಜೈಲಿಂದ! ನಾನು ಮರೆತಿಲ್ಲ! ಹೆಮ್ಮೆ ಪಟ್ಟೆ ನಿಮ್ಮ ಬೆಳವಣಿಗೆಗೆ! ರಾತ್ರೋ ರಾತ್ರಿ ರಾಷ್ಟ್ರ ನಾಯಕನಾಗಲು ಮೋದಿ ತೆಗಳುವ ಆಯ್ಕೆ! ನೆನಪಿಡಿ ಮೋದಿ ತೆಗಳಿದ್ದಕ್ಕೆ ನಿಮಗೆ ಮಾತನಾಡಲು ವೇದಿಕೆ ಸಿಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೆ ಸ್ಪರ್ಧಿಸುವವರ ಆದಾಯ ಮೂಲ ಘೋಷಣೆಗೆ ಸುಪ್ರೀಂ ಆದೇಶ