Publish Date: Wed, 07 Feb 2018 (10:27 IST)
Updated Date: Wed, 07 Feb 2018 (10:35 IST)
ಬೆಂಗಳೂರು: ನಟಿ ರಮ್ಯಾ ಮತ್ತು ಬಿಜೆಪಿ ನಾಯಕರ ನಡುವಿನ ಟ್ವಿಟರ್ ವಾರ್ ಇನ್ನೂ ಮುಂದುವರಿದಿದೆ. ರಮ್ಯಾ ಬಗ್ಗೆ ಬಂದಿರುವ ನಕಲಿ ಖಾತೆಗೆ ಆಹ್ವಾನ ನೀಡುವ ವಿಡಿಯೋ ಒಂದು ಇದೀಗ ಬಿಜೆಪಿ ನಾಯಕರಿಗೆ ಟೀಕಾಸ್ತ್ರವಾಗಿದೆ.
ವಿಡಿಯೋ ಬಗ್ಗೆ ಕಾಮೆಂಟ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್, ‘ಯಾವಾಗಲೂ ಬೇರೆಯವರ ತಪ್ಪು ಹುಡುಕುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷೆ ನಶೆ ರಾಣಿ ರಮ್ ರವರ ನಿಜ ಬಣ್ಣ ಇದು. ತಾವೇ ಸ್ವತಃ ಹಲವು ನಕಲಿ ಸಾಮಾಜಿಕ ಜಾಲತಾಣದ ಖಾತೆ ಇಟ್ಟುಕೊಂಡಿರುವುದಲ್ಲದೆ, ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿ ಬಗ್ಗೆ ತಪ್ಪು ಮಾಹಿತಿ ರವಾನಿಸಲು ಹೇಳುತ್ತಿದ್ದಾರೆ’ ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ರಮ್ಯಾ ಬಗ್ಗೆ ಟ್ವಿಟರ್ ನಲ್ಲಿ ಕಿಡಿ ಕಾರಿರುವ ನವರಸನಾಯಕ ಜಗ್ಗೇಶ್ ‘ಫೇಕ್ ಅಕೌಂಟ್ ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ. ಭಾರತದ ನಾಗರಿಕ ಕುಲವಂತರು! ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿ ಜಾಲತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೆ! ಹೇಗೆ ತಯಾರು ಮಾಡುತ್ತಾರೆ ನೋಡಿ ಅರ್ದಬೆಂದ ಮಡಕೆಗಳ! ಪ್ರತಿ ವ್ಯಕ್ತಿ 15 ರೂ. ಪೇಮೆಂಟ್ ಬೇರೆ! ದೌರ್ಭಾಗ್ಯ’ ಎಂದು ಜಗ್ಗೇಶ್ ಟೀಕಾ ಪ್ರಹಾರ ನಡೆಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ