Daily Horoscope
✕

ಮೋದಿ ಬರುತ್ತಿದ್ದಾರೆಂದು ಜಗ್ಗೇಶ್ ಭಾವುಕರಾಗಿದ್ದು ಯಾಕೆ?!

Webdunia
ಶುಕ್ರವಾರ, 4 ಮೇ 2018 (09:18 IST)
ಬೆಂಗಳೂರು: ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮದೇ ಕ್ಷೇತ್ರಕ್ಕೆ ಬರುತ್ತಿದ್ದಾರೆಂದು ನವರಸನಾಯಕ, ಬಿಜೆಪಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜಗ್ಗೇಶ್ ಭಾವುಕರಾಗಿದ್ದರು.

ಮೋದಿ ಆಗಮನಕ್ಕೂ ಮೊದಲೇ ಟ್ವಿಟರ್ ನಲ್ಲಿ ಕ್ಷಣ ಕ್ಷಣಕ್ಕೂ ಟ್ವೀಟ್ ಮಾಡುತ್ತಿದ್ದ ಜಗ್ಗೇಶ್, ನನ್ನ ಕ್ಷೇತ್ರಕ್ಕೆ ಅವರು ಬರುವುದನ್ನು ಕಾಯುತ್ತಿದ್ದೇನೆ ಎಂದಿದ್ದರು.

‘ಇಂದು ನನ್ನ ಬದುಕಿನಲ್ಲಿ ನೆನಪಿಡುವ ದಿನ. ವಿಶ್ವ, ರಾಷ್ಟ್ರ ಮೆಚ್ಚಿದ ನಾಯಕ ನರೇಂದ್ರ ಮೋದಿ ಭಾರತಾಂಬೆಯ ಹೆಮ್ಮೆಯ ಪುತ್ರನ ಆಶೀರ್ವಾದವನ್ನು ನೇರವಾಗಿ ಪಡೆಯುವ ಸುದಿನ. ಅಪ್ಪ –ಅಮ್ಮ ಇದ್ದಿದ್ದರೆ ಸಾರ್ಥಕವಾಯಿತು ಮಗನೇ ಎಂದು ಹರಸುತ್ತಿದ್ದರೇನೋ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ, ಸಮಾವೇಶಕ್ಕೆ ಬರಲು ದಾರಿಯನ್ನೂ ಟ್ವಿಟರ್ ಮೂಲಕ ಹಾಕಿದ್ದರು.

ಬಳಿಕ ಸಮಾವೇಶದಲ್ಲಿ ಜಗ್ಗೇಶ್ ಸೀದಾ ಪ್ರಧಾನಿ ಮೋದಿ ಕಾಲಿಗೆರಗಿದರು. ಆ ಸಂದರ್ಭದಲ್ಲಿ ತಮ್ಮ ಭುಜ ತಟ್ಟಿ ಹಾರೈಸಿದ ಕ್ಷಣವನ್ನು ಟ್ವಿಟರ್ ನಲ್ಲಿ ಹಾಕಿಕೊಂಡು ಖುಷಿಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments