Publish Date: Mon, 19 Mar 2018 (12:40 IST)
Updated Date: Mon, 19 Mar 2018 (12:42 IST)
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಎದ್ದಿರುವುದೇ ಸಿಎಂ ಸಿದ್ದರಾಮಯ್ಯನವರ ರಾಜಕೀಯ ದುರುದ್ದೇಶದಿಂದ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಿಂದ ಯಾವ ಲಾಭವೂ ಇಲ್ಲ. ಇದೆಲ್ಲಾ ಸಿಎಂ ಸಿದ್ದರಾಮಯ್ಯನವರ ಮತ ವಿಭಜನೆ ಮಾಡುವ ಕುತಂತ್ರವಷ್ಟೇ ಎಂದಿದ್ದಾರೆ.
ಒಂದು ವೇಳೆ ಪ್ರತ್ಯೇಕ ಧರ್ಮ ಮಾಡಿದರೂ ಅದರ ಪರಿಣಾಮ ಅವರೇ ಎದುರಿಸಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ